ADVERTISEMENT

ಸದಸ್ಯರ ಜೊತೆ ಚರ್ಚಿಸಿ ಶರ್ಮಾ ಪತ್ರ?

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 20:15 IST
Last Updated 13 ಮಾರ್ಚ್ 2018, 20:15 IST

ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಕುರಿತು ಸಂಘದ ಸದಸ್ಯರ ಜೊತೆ ಚರ್ಚಿಸಿದ ಬಳಿಕವೇ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಐಪಿಎಸ್ ಅಧಿಕಾರಿಗಳ ಸಂಘ ಅಧ್ಯಕ್ಷರೂ ಆಗಿರುವ ಎಡಿಜಿಪಿ ಆರ್.ಪಿ. ಶರ್ಮಾ ಸ್ಪಷ್ಟನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಪತ್ರದಲ್ಲಿರುವ ಅಂಶಗಳು ವೈಯಕ್ತಿಕ ಅಭಿಪ್ರಾಯ ಅಲ್ಲ. ಸದಸ್ಯರ ಅಭಿಪ್ರಾಯ. ಅದನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ ಎನ್ನಲಾಗಿದೆ.

ಉತ್ತರ ಬಂದಿಲ್ಲ: ‘ಶರ್ಮಾ ಬರೆದ ಪತ್ರದ ಬಗ್ಗೆ ವಿವರಣೆ ನೀಡುವಂತೆ ಸಂಘದ ಕಾರ್ಯದರ್ಶಿಗೆ ಬರೆದಿರುವ ಪತ್ರಕ್ಕೆ ಉತ್ತರ ಬಂದಿಲ್ಲ‌’ ಎಂದು ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ತಿಳಿಸಿದರು.

ADVERTISEMENT

‘ಸಂಘದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೆ ಸಭೆಯ ನಡಾವಳಿಯನ್ನು ಕಳುಹಿಸುವಂತೆ ಪತ್ರದಲ್ಲಿ ಸೂಚಿಸಿದ್ದೇನೆ’ ಎಂದೂ ಅವರು ಹೇಳಿದರು.

ಸಂಘದ ಲೆಟರ್‌ ಹೆಡ್‌ನಲ್ಲಿ ಪತ್ರ ಬರೆದಿದ್ದ ಶರ್ಮಾ, ‘ಪ್ರಮುಖ ಪ್ರಕ
ರಣಗಳ ತನಿಖೆಯನ್ನು ರಾಜಕಾರಣಿಗಳು ಹೈಜಾಕ್‌ ಮಾಡುತ್ತಿದ್ದಾರೆ. ಇದರಿಂದ ಪೊಲೀಸ್‌ ವ್ಯವಸ್ಥೆಯ ಘನತೆಗೆ ಧಕ್ಕೆ ಬರುತ್ತಿದೆ’ ಎಂದೂ ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.