ADVERTISEMENT

ಸಿದ್ದರಾಮಯ್ಯ ಅಯೋಗ್ಯ ದಿಂಗಾಲೇಶ್ವರ ಸ್ವಾಮೀಜಿ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 20:46 IST
Last Updated 19 ಮಾರ್ಚ್ 2018, 20:46 IST

ದಾವಣಗೆರೆ: ‘ಲಿಂಗಾಯತ, ವೀರಶೈವ ಲಿಂಗಾಯತ ಹಾಗೂ ಬಸವತತ್ವ ಅನುಯಾಯಿಗಳು ಇವರಿಗೆಲ್ಲ 2ಬಿ ಅಡಿ ಮೀಸಲಾತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಮೀಸಲಾತಿ ಶಿಕ್ಷಣಕ್ಕೆ ಮಾತ್ರ, ಉದ್ಯೋಗಕ್ಕೆ ಅಲ್ಲ. ಇದನ್ನೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ತಜ್ಞರ ಸಮಿತಿ ನೀಡಿದ ವರದಿ ಮೂಲೆಗುಂಪಾದಂತೆ’ ಎಂದು ಅಭಿಪ್ರಾಯಪಟ್ಟ ಅವರು, ‘ಮಹಾಸಭಾದ ಸಭೆಯನ್ನು ಇದೇ 23 ಅಥವಾ 24ರಂದು ಕರೆದು ವಿವರವಾಗಿ ಚರ್ಚಿಸಲಾಗುವುದು’ ಎಂದರು.

ಇದು ಸರ್ಕಾರದ ಯುಗಾದಿ ಉಡುಗೊರೆಯೇ ಎಂಬ ಪ್ರಶ್ನೆಗೆ, ‘ಇದು ಸರ್ಕಾರದ ಯುಗಾದಿ ಗಿಫ್ಟ್‌ ಅಲ್ಲ; ತನ್ನ ತಲೆನೋವು ಕಡಿಮೆ ಮಾಡಿಕೊಂಡಿದೆ ಅಷ್ಟೇ’ ಎಂದರು.

ADVERTISEMENT

ವಿರೋಧಿಸುವುದರಲ್ಲಿ ಅರ್ಥ ಇಲ್ಲ: ‘ಸರ್ಕಾರದ ತೀರ್ಮಾನವನ್ನು ವಿರೋಧಿ ಸುವುದರಲ್ಲಿ ಅರ್ಥ ಇಲ್ಲ. ಸ್ವಾಮೀಜಿಗಳು ಹೀಗೆ ಕೂಗಿಕೊಂಡು ಇರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.