ADVERTISEMENT

ಸೀತಾರಾಮು ನಿವಾಸಕ್ಕೆ ಅಂಬರೀಷ್ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ಮದ್ದೂರು:  ಪಟ್ಟಣದಿಂದ ಉತ್ತರ ಭಾರತ ಪ್ರವಾಸಕ್ಕೆ ತೆರಳಿ ಜಲಪ್ರವಾಹಕ್ಕೆ ಸಿಲುಕಿರುವ ಕುಟುಂಬದ ಸದಸ್ಯರಾದ ಪತ್ರಕರ್ತ ಎಂ.ಜಿ. ಸೀತಾರಾಮು ಅವರ ನಿವಾಸಕ್ಕೆ ಸಚಿವ ಅಂಬರೀಷ್ ಸೋಮವಾರ ತೆರಳಿ, ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಸೀತಾರಾಮು ಅವರ ಮಾವ ಹಾಗೂ ಹತ್ತಿರ ಸಂಬಂಧಿಗಳಿಗೆ ಭೇಟಿ ಮಾಡಿದ ಅವರು, ಪತ್ತೆಯಾಗಿರುವ ಕುಟುಂಬದ ಐವರು ಸದಸ್ಯರನ್ನು ಸುರಕ್ಷಿತವಾಗಿ ಕರೆತರುವ ಹಾಗೂ ನಾಪತ್ತೆಯಾದ ಇನ್ನುಳಿದ 13 ಮಂದಿ ಸದಸ್ಯರ ಪತ್ತೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.