ADVERTISEMENT

ಹಸುಗೂಸಿನೊಂದಿಗೆ ತಂದೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST

ಅಫಜಲಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ದೇವಲಗಾಣಗಾಪುರದಲ್ಲಿ ಭಾನುವಾರ ಪತ್ನಿಯೊಂದಿಗೆ ಜಗಳವಾಡಿದ ಪತಿ ಕುಡಿದ ಮತ್ತಿನಲ್ಲಿ ತನ್ನ ಎರಡೂವರೆ ತಿಂಗಳ ಪುತ್ರಿ ಜೊತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಟಗಾ ಗ್ರಾಮದ ನಿವಾಸಿ ಶರಣು ಕವಲಗಿ (32) ಮತ್ತು ಪುತ್ರಿ ಋತ್ವಿ ಮೃತರು.

ಪತ್ನಿಯ ತವರು ಮನೆಯಾದ ಗಾಣಗಾಪುರಕ್ಕೆ ಶರಣು ಬೆಳಿಗ್ಗೆ ಹೋಗಿದ್ದರು. ಹೆರಿಗೆ ನಂತರ ಪತ್ನಿ ತವರು ಮನೆಯಲ್ಲಿ ಇದ್ದು, ಆಕೆಯೊಂದಿಗೆ ಜಗಳವಾಡಿ
ದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT