ADVERTISEMENT

ಹಾಸ್ಯ ಲೇಖಕಿ ಟಿ.ಎಸ್.ಅಂಬುಜಾ ನಿಧನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಉಡುಪಿ: ಹಾಸ್ಯ ಲೇಖಕಿ ಹಾಗೂ ಉಡುಪಿ ಜಿಲ್ಲಾ ಲೇಖಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಅಂಬುಜಾ (57) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಬೆಳಿಗ್ಗೆ ಬೆಂಗಳೂರಿನ ಮಣಿಪಾಲ
ಆಸ್ಪತ್ರೆಯಲ್ಲಿ ನಿಧನರಾದರು.

ಅಂಬುಜಾ ಅವರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮಲ್ಪೆ ರಾಮದಾಸ ಸಾಮಗರ ಕೊನೆಯ ಪುತ್ರಿಯಾಗಿದ್ದ ಅವರು ತಮ್ಮ ತಂದೆಯ ಜೀವನ ಚರಿತ್ರೆ  `ಸಾಮಗಾಯಣ~, ಮಲ್ಪೆ ಶಂಕರ ನಾತಾಯಣ ಸಾಮಗರ ಜೀವನದ ಘಟನೆಗಳ ಕುರಿತು `ರಂಗದ ರಂಗೋಲಿ~ ಹಾಗೂ `ಮರೆತ ಮಾಣಿಕ್ಯ~ ಕೃತಿಗಳನ್ನು ರಚಿಸಿದ್ದಾರೆ.
 
ಹಾಸ್ಯ ಲೇಖನಗಳ ಸಂಕಲನ `ಹೋಯ್! ಮತ್ತೇನು ವಿಶೇಷ?~ ಅವರ ಮೊದಲ ಕೃತಿ.  `ಹಲೋ ಆಂಟಿ, ಹಾಯ್ ಅಂಕಲ್~, `ನಗು ಮೊಗದ ಸಿರಿ~ ಕೃತಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. `ಸುಹಾಸಂ~ ಲೇಖಕರ ಬಳಗದ ಸದಸ್ಯೆ ಆಗಿದ್ದ ಅವರು, `ಅತ್ತಿಮಬ್ಬೆ~ ಪ್ರಶಸ್ತಿ ಪುರಸ್ಕೃತರೂ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.