ADVERTISEMENT

20 ಅಕ್ರಮ ಪಿಸ್ತೂಲ್ ವಶ; 12 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST

ವಿಜಯಪುರ: ನಾಡ ಪಿಸ್ತೂಲ್ ಮತ್ತು ಗುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 12 ಮಂದಿಯನ್ನು ವಿಜಯಪುರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅವರಿಂದ 20 ಪಿಸ್ತೂಲ್, 49 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಅಲ್ತಾಫ್‌ ಮಹಿಬೂಬ ವಾಲೀಕಾರ, ಸೋಮಣ್ಣ ಮಲ್ಲಪ್ಪ ಅಗಸರ, ಗುರುಬಸಪ್ಪ ಸಿದ್ದಣ್ಣ ದೊಡ್ಡಗಾಣಗೇರ, ಗಣಪತಿ ಭೀಮಾಶಂಕರ ವೀರಶೆಟ್ಟಿ, ಗೌಸ್‌ ಅನೀಸ್ ಸುತಾರ, ಹೈದರ್ ಮೌಲಾಸಾಬ್‌ ಜಾಲಗೇರಿ, ಗೈಬು ಹಾಜಿಸಾಬ್ ಸಾರವಾಡ, ಚಾಂದ್‌ಪೀರಾ ಮಹಮ್ಮದ್‌ಗೌಸ್‌ ಇನಾಮದಾರ, ಸಮೀರ್ ರಜಾಕ್‌ಸಾಬ್‌ ಯರಗಲ್ಲ ಹಾಗೂ ಕಲಬುರ್ಗಿ ಜಿಲ್ಲೆಯ ಕೈಲಾಸ ಅರ್ಜುನ ದೇಕುಣ, ಗೌಡಪ್ಪ ಶರಣಪ್ಪ ಕೊಕಟನೂರ ಬಂಧಿತರು.

ಈ ವಿಷಯವನ್ನು ಉತ್ತರ ವಲಯ ಐಜಿಪಿ ಡಾ.ಕೆ.ರಾಮಚಂದ್ರರಾವ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ವಿಜಯಪುರ ದರ್ಗಾ ಜೈಲಿನಲ್ಲಿರುವ ಇಂಡಿ ತಾಲ್ಲೂಕು ನಂದರಗಿ ಗ್ರಾಮದ ಏಜಾಜ್‌ ಬಂದೇ ನವಾಜ್ ಪಟೇಲ್‌ ಎಂಬಾತ, ಮಧ್ಯಪ್ರದೇಶದ ಬಚ್ಚನ್‌ಸಿಂಗ್‌ ಮನ್‌ಸಿಂಗ್‌ ಸರ್ದಾರ್‌, ತನಮನ್‌ಸಿಂಗ್ ಎಂಬುವರ ಜತೆ ನಂಟು ಬೆಳೆಸಿ, ಈ ಆರೋಪಿಗಳ ಮೂಲಕ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.