ADVERTISEMENT

ಕರ್ನಾಟಕ ಹೈಕೋರ್ಟ್‌ಗೆ 20 ಎಎಜಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 3 ಜುಲೈ 2023, 21:57 IST
Last Updated 3 ಜುಲೈ 2023, 21:57 IST
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್   

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗೆ 20 ವಕೀಲರನ್ನು ನೇಮಕ ಮಾಡಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಇವರಲ್ಲಿ 10 ಜನರು ಬೆಂಗಳೂರು, ಮೂವರು ಕಲಬುರಗಿ ಮತ್ತು ಧಾರವಾಡಕ್ಕೆ ಇಬ್ಬರನ್ನು ನೇಮಕ‌ ಮಾಡಲಾಗಿದೆ.

ಬೆಂಗಳೂರು: ಹಿರಿಯ ವಕೀಲ ವಿಕ್ರಂ ಹುಯಿಲಗೋಳ, ಕೆಂಪಣ್ಣ, ಸಂತೋಷ ಎಸ್. ಗೋಗಿ, ಪ್ರತಿಮಾ ಹೊನ್ನಾಪುರ, ಇಸ್ಮಾಯಿಲ್ ಜಬೀವುಲ್ಲಾ, ಸಿ.ಎಸ್.ಪ್ರದೀಪ್, ರೂಬೆನ್ ಜಾಕೊಬ್, ವಿ.ಜಿ.ಭಾನುಪ್ರಕಾಶ್, ಕಿರಣ ರೋಣ, ಎಸ್.ಎ.ಅಹ್ಮದ್.

ADVERTISEMENT

ಧಾರವಾಡ: ಜೆ.ಎಂ.ಗಂಗಾಧರ ಮತ್ತು ಕೇಶವ ರೆಡ್ಡಿ.

ಕಲಬುರಗಿ: ಮಲ್ಹಾರ ರಾವ್, ವೈ.ಎಚ್. ವಿಜಯ ಕುಮಾರ್ ಮತ್ತು ಅರ್ಚನಾ ಬಿ.ತಿವಾರಿ.

ಸುಪ್ರೀಂ ಕೋರ್ಟ್ ಪ್ರತಿನಿಧಿಗಳಾಗಿ ಐವರು ಎಎಜಿಗಳನ್ನು ನೇಮಕ‌ ಮಾಡಲಾಗಿದೆ. ನಿಶಾಂತ ಪಾಟೀಲ, ಮೊಹಮದ್ ಅಲಿಖಾನ್, ಪ್ರತೀಕ್ ಛಡ್ಡಾ, ಆವಿಷ್ಕಾರ್ ಸಿಂಘ್ವಿ ಮತ್ತು ಅಮನ್ ಪನ್ವಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.