ADVERTISEMENT

‘ಕೂಲ್‌ ಆಗಿ ಪರೀಕ್ಷೆ ಬರೆಯಿರಿ: ವಿದ್ಯಾರ್ಥಿಗಳಿಗೆ ಜಾಫರ್ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 19:18 IST
Last Updated 18 ಫೆಬ್ರುವರಿ 2019, 19:18 IST
ಸೋಮವಾರ ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳ ಸಂದೇಹಗಳಿಗೆ ಪದವಿಪೂರ್ವ ಶಕ್ಷಣ ಇಲಾಖೆಯ ನಿರ್ದೇಶಕ ಪಿ.ಸಿ.ಜಾಫರ್ ಪರಿಹಾರ ನೀಡಿದರು. ಇಲಾಖೆಯ ಹಿರಿಯ ಅಧಿಕಾರಿಗಳಾದ ರಾಜಶೇಖರ ಎಚ್.ಜಿ. ಹಾಗೂ ಜಿಯಾಉಲ್ಲಾ ಇದ್ದಾರೆ –ಪ್ರಜಾವಾಣಿ ಚಿತ್ರ -Photo/ ANAND BAKSHI
ಸೋಮವಾರ ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳ ಸಂದೇಹಗಳಿಗೆ ಪದವಿಪೂರ್ವ ಶಕ್ಷಣ ಇಲಾಖೆಯ ನಿರ್ದೇಶಕ ಪಿ.ಸಿ.ಜಾಫರ್ ಪರಿಹಾರ ನೀಡಿದರು. ಇಲಾಖೆಯ ಹಿರಿಯ ಅಧಿಕಾರಿಗಳಾದ ರಾಜಶೇಖರ ಎಚ್.ಜಿ. ಹಾಗೂ ಜಿಯಾಉಲ್ಲಾ ಇದ್ದಾರೆ –ಪ್ರಜಾವಾಣಿ ಚಿತ್ರ -Photo/ ANAND BAKSHI   

ಬೆಂಗಳೂರು:‘ಬೆಳಿಗ್ಗೆ ಸಂಜೆ ವಾಕ್‌ ಅಥವಾ ಜಾಗ್‌ ಮಾಡಿ, ಉಳಿದ ಸಮಯದಲ್ಲಿ ಆರಾಮವಾಗಿ ಓದಿಕೊಳ್ಳಿ, ಕೂಲ್‌ ಆಗಿ ಪರೀಕ್ಷೆ ಬರೆಯಿರಿ’.

ದ್ವಿತೀಯ ಪಿಯು ಪರೀಕ್ಷೆಗೆ ಅಂತಿಮ ಹಂತದ ತಯಾರಿ ನಡೆಸಿಕೊಂಡು ‘ಪರೀಕ್ಷಾ ಭಯ’ಕ್ಕೆ ತುತ್ತಾಗಿರುವವಿದ್ಯಾರ್ಥಿಗಳಿಗೆ ಜಾಫರ್‌ ನೀಡಿದ ಆಪ್ತ ಸಲಹೆಗಳಿವು.

ಕರೆ ಮಾಡಿದವರಲ್ಲಿ ಕೆಲವರು ಪರೀಕ್ಷೆ ಎಂದರೆ ಭಯ ಎಂಬುದಾಗಿ ತಮ್ಮ ಆತಂಕ ತೋಡಿಕೊಂಡರೆ, ಮತ್ತೆ ಕೆಲವರು ಹೆಚ್ಚು ಅಂಕಗಳನ್ನು ಹೇಗೆ ಪಡೆಯಬೇಕು, ಅದಕ್ಕೆ ಏನು ಮಾಡಬೇಕು ಎಂಬ ಸಲಹೆ ಕೇಳಿದರು. ಪ್ರತಿಯೊಬ್ಬರಿಗೂ ಉಪಯುಕ್ತ ಸಲಹೆಗಳನ್ನು ನೀಡಿದ ಜಾಫರ್‌, ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಸಿನ ಭಾರವನ್ನು ಇಳಿಸಿದರು.

ADVERTISEMENT

‘ಆತಂಕ, ಹೆದರಿಕೆ ಯಾಕೆ? ನೀವು ಯುದ್ಧ ಮಾಡಲು ಹೋಗ್ತಿಲ್ಲ. ಆರಾಮವಾಗಿರಿ, ರಿಲ್ಯಾಕ್ಸ್‌ ಮಾಡಿ. ಯಾರೂ ನಿದ್ದೆಗೆಟ್ಟು ಓದಬೇಕಾಗಿಲ್ಲ. ಅಂಕಗಳ ವಿಚಾರದಲ್ಲಿ ಬೇರೆಯವರ ಜೊತೆ ಹೋಲಿಕೆ ಮಾಡಿಕೊಳ್ಳಲು ಹೋಗಬೇಡಿ. ವಿಷಯಗಳ ಬಗ್ಗೆ ಗಮನವಿಟ್ಟು ಓದಿಕೊಳ್ಳಿ’ ಎಂದು ವಿಶ್ವಾಸ ತುಂಬಿದರು.

ಪರೀಕ್ಷೆಗೆ ಇನ್ನೂ ಸುಮಾರು 15 ದಿನಗಳು ಉಳಿದಿರುವುದರಿಂದ ಪ್ರತಿಯೊಂದು ವಿಷಯವನ್ನು ಬಿಡಿಸಿ ಅಭ್ಯಾಸ ಮಾಡಿಕೊಳ್ಳಿ. ಉತ್ತರ ಬರೆಯುವಾಗ ಅದರಲ್ಲೂ ಇಂಗ್ಲಿಷ್‌ನಲ್ಲಿ ಬರೆಯುವಾಗ ಸರಳವಾಗಿ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತೆ ಸರಳ ವಾಕ್ಯ
ಗಳಲ್ಲಿ ಬರೆಯಬೇಕು. ಕಠಿಣ ಪದಗಳನ್ನು ಬಳಸಿದರೆ ಹೆಚ್ಚು ಅಂಕ ಕೊಡುತ್ತಾರೆ ಎಂಬ ಭಾವನೆ ಬಿಟ್ಟುಬಿಡಿ ಎಂದು ಕಿವಿ ಮಾತು ಹೇಳಿದರು.

ಪರೀಕ್ಷೆಯ ವ್ಯವಸ್ಥೆ ಕಂಪ್ಯೂಟರೀಕರಣ ಮಾಡಿರುವುದರಿಂದ ಫಲಿತಾಂಶ ತ್ವರಿತವಾಗಿ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ನಿರುಮ್ಮಳರಾಗಿ ಪರೀಕ್ಷೆ ಬರೆಯಲಿ, ‘ಆಲ್‌ ದ ಬೆಸ್ಟ್‌’ ಎಂದು ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.