ADVERTISEMENT

ನೋಡಿ| ಹಸುವಿನ ಹೊಟ್ಟೆಯಲ್ಲಿತ್ತು 40 ಕೆ.ಜಿ. ಪ್ಲಾಸ್ಟಿಕ್! |

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 14:19 IST
Last Updated 18 ಫೆಬ್ರುವರಿ 2021, 14:19 IST

ಕೋಣಂದೂರು (ತೀರ್ಥಹಳ್ಳಿ ತಾ.): ಸಮೀಪದ ಹೊರಬೈಲ್ ಗ್ರಾಮದ ಸುಧೀರ್ ಭಟ್ ಅವರಿಗೆ ಸೇರಿದ ಹಸುವಿನ ಹೊಟ್ಟೆಯಲ್ಲಿದ್ದ 40 ಕೆ.ಜಿ. ಪ್ಲಾಸ್ಟಿಕ್ ಅನ್ನು ಇಲ್ಲಿನ ಪಶು ವೈದ್ಯಾಧಿಕಾರಿ ಡಾ. ಆನಂದ್‌ ಅವರು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದಾರೆ.

ಕೆಲವು ದಿನಗಳಿಂದ ಮಲೆನಾಡು ತಳಿಯ ಈ ಹಸು ಸರಿಯಾಗಿ ಮೇವು ತಿನ್ನದೇ, ಮೆಲುಕು ಹಾಕದೇ ಹೊಟ್ಟೆ ಉಬ್ಬರಿಸಿತ್ತು. ಡಾ.ಆನಂದ್ ಹಸುವನ್ನು ಪರೀಕ್ಷಿಸಿ ಶಸ್ತ್ರಚಿಕಿತ್ಸೆಯ ಮೂಲಕ 40 ಕೆ.ಜಿ.ಗೂ ಹೆಚ್ಚು ಮೇವು ರಸ ಮಿಶ್ರಿತ ಗಟ್ಟಿಯಾದ ಪ್ಲಾಸ್ಟಿಕ್ ಅನ್ನು ಹೊರ ತೆಗೆದಿದ್ದಾರೆ.

‘ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಮತ್ತು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಜಾನುವಾರು ಇಂತಹ ಆಪತ್ತಿಗೆ ಸಿಲುಕುತ್ತವೆ. ಸಾರ್ವಜನಿಕರು ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಅನ್ನು ಮಿತಿಯಲ್ಲಿ ಬಳಸಬೇಕು. ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಮೂಕ ಪ್ರಾಣಿಗಳ ಜೀವಕ್ಕೆ ಸಂಚಕಾರ ತರದಂತೆ ಎಚ್ಚರ ವಹಿಸಬೇಕು’ ಎಂದು ಡಾ. ಆನಂದ ಸಲಹೆ ನೀಡಿದ್ದಾರೆ.
ಪಶು ವೈದ್ಯಕೀಯ ಸಹಾಯಕ ಸಚಿನ್, ಸುಧೀರ್ ಭಟ್ ಇದ್ದರು.

ADVERTISEMENT

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.