ADVERTISEMENT

ನಾನು ಬೇವರ್ಸಿ ಅಲ್ಲ: ಅನಿಲ್‌ ಲಾಡ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 6:20 IST
Last Updated 10 ಜನವರಿ 2018, 6:20 IST
ಅನಿಲ್‌ ಲಾಡ್‌
ಅನಿಲ್‌ ಲಾಡ್‌   

ಬಳ್ಳಾರಿ: ‘ನಾನು ಬೇವರ್ಸಿ ಅಲ್ಲ, ನನಗೆ ಮೂರು ಪಕ್ಷಗಳಿಂದ ಆಫರ್‌ ಇದೆ’ ಎಂದು ನಗರ ಶಾಸಕ ಅನಿಲ್‌ ಲಾಡ್‌ ಆಕ್ರೋಶದಿಂದ ನುಡಿದರು.

ಆಶ್ರಯ ಯೋಜನೆ ಸಂಬಂಧ ಮಾಹಿತಿ ನೀಡಲು ನಗರದಲ್ಲಿನ ತಮ್ಮ ಮನೆಯಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಚುನಾವಣೆ ಟಿಕೆಟ್‌ ವಿಷಯ ಪ್ರಸ್ತಾಪವಾದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ನನಗೆ ಟಿಕೆಟ್‌ ಸಿಗುವುದಿಲ್ಲ ಎಂದು ನಮ್ಮ ಕಾಂಗ್ರೆಸ್‌ ಪಕ್ಷದೊಳಗಿನವರೇ ಊಹಾಪೋಹ ಹಬ್ಬಿಸುತ್ತಿದ್ದಾರೆ. ಅದರ ಹಿಂದೆ ಕಾಣದ ಶಕ್ತಿಗಳ ಕೈವಾಡವಿದೆ’ ಎಂದು ಅವರು ಕೆಲವು ದಿನಗಳ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.