ADVERTISEMENT

ವಕೀಲರ ಸಂಘದ ಅಧ್ಯಕ್ಷರಾಗಿ ರಂಗನಾಥ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಎ.ಪಿ. ರಂಗನಾಥ್
ಎ.ಪಿ. ರಂಗನಾಥ್   

ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಎ.‍ಪಿ. ರಂಗನಾಥ್ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರಯ್ಯ, ಖಜಾಂಚಿಯಾಗಿ ಶಿವಮೂರ್ತಿ ಆಯ್ಕೆಯಾಗಿದ್ದಾರೆ. ಇವರ ಅವಧಿ 2020ರವರೆಗೆ ಇರಲಿದೆ.

ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ಚುನಾವಣೆ ನಡೆಯಿತು. ಒಟ್ಟು 14,682 ಮತದಾರರ ಪೈಕಿ 10,466 ವಕೀಲರು ಮತ ಚಲಾಯಿಸಿದರು.

ADVERTISEMENT

4,088 ಮತ ಗಳಿಸಿರುವ ರಂಗನಾಥ್, 1,196 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿಗಳಲ್ಲಿ ಆರ್‌. ರಾಜಣ್ಣ 2,998, ಸಿ.ಆರ್‌. ಗೋಪಾಲಸ್ವಾಮಿ 1,363 ಮತ್ತು ಎಚ್‌.ಸಿ. ಶಿವರಾಮು 1,368 ಮತ ಪಡೆದರು.

ಎ.ಪಿ. ರಂಗನಾಥ ಬೆಂಗಳೂರಿನವರಾಗಿದ್ದು, ಖ್ಯಾತ ಕ್ರಿಮಿನಲ್ ವಕೀಲ ಸಿ.ಎಚ್. ಹನುಮಂತರಾಯ ಅವರ ಬಳಿ ಕಿರಿಯ ವಕೀಲರಾಗಿ ದಶಕಕ್ಕೂ ಹೆಚ್ಚು ಕಾಲ ವೃತ್ತಿ ಅನುಭವ ಹೊಂದಿದ್ದಾರೆ. ಈ ಹಿಂದೆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸದ್ಯ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷರೂ ಆಗಿದ್ದಾರೆ.

ಆಮಿಷ ಆಘಾತಕಾರಿ: ‘ವಕೀಲರ ಸಂಘದ ಚುನಾವಣೆಯಲ್ಲಿ ಹಣ, ಚಿನ್ನ, ಬೆಳ್ಳಿ, ಮದ್ಯದ ಆಮಿಷ ಒಡ್ಡಿದ್ದರು ಎನ್ನುವ ಮಾಹಿತಿ ಆಘಾತಕಾರಿ ಸಂಗತಿ’ ಎಂದು ಪ್ರೊ.ಬಿ.ಕೆ. ಚಂದ್ರಶೇಖರ್‌ ಆತಂಕ ವ್ಯಕ್ತಪಡಿಸಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಬೇಕಾದ ವಕೀಲರು ಸಾಮಾಜಿಕ ಬದ್ಧತೆ ಪ್ರದರ್ಶಿಸಿ ನಾಯಕತ್ವ ವಹಿಸಿಕೊಳ್ಳಬೇಕಲ್ಲವೇ’ ಎಂದೂ ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.