ADVERTISEMENT

ಸ್ವಾಮೀಜಿಗಳ ಸಾರೋಟು ಮೆರವಣಿಗೆ ರದ್ದು

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 8:00 IST
Last Updated 25 ಜನವರಿ 2018, 8:00 IST
ಸ್ವಾಮೀಜಿಗಳ ಸಾರೋಟು ಮೆರವಣಿಗೆ ರದ್ದು
ಸ್ವಾಮೀಜಿಗಳ ಸಾರೋಟು ಮೆರವಣಿಗೆ ರದ್ದು   

ಬೆಳಗಾವಿ: ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಬಂದ್ ನಡೆಸುತ್ತಿರುವುದರಿಂದ, ಸ್ವಾಮೀಜಿಗಳ ಸಾರೋಟು ಮೆರವಣಿಗೆ ರದ್ದುಪಡಿಸಲಾಯಿತು.

ರಾಣಿ ಚನ್ನಮ್ಮ ವೃತ್ತದಿಂದ ಶ್ರೀಗಳನ್ನು ಉಷಾಕಾಲೊನಿಯ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಕರೆತರಲು ಉದ್ದೇಶಿಸಲಾಗಿತ್ತು.

ಸ್ವಾಮೀಜಿಗಳಿಗೆ ಧಾರ್ಮಿಕ ಜವಾಬ್ದಾರಿಯಷ್ಟೇ ಇರುವುದಿಲ್ಲ. ಸಾಮಾಜಿಕ ಕಳಕಳಿಯೂ ಇರುತ್ತದೆ. ಹೀಗಾಗಿ ಕರ್ನಾಟಕ ಬಂದ್ ಇರುವುದರಿಂದ ಉತ್ಸವ ಬೇಡವೆಂದು ನಿರ್ಧರಿಸಿದೆವು.

ADVERTISEMENT

ರೈತರ ಹೋರಾಟ ಬೆಂಬಲಿಸಿದ್ದೇವೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಮಹದಾಯಿ ನೀರಿನ ವಿಚಾರದಲ್ಲಿ ಕೇಂದ್ರವಾಗಲಿ, ರಾಜ್ಯ ಸರ್ಕಾರವಾಗಲಿ ರಾಜಕೀಯ ಮಾಡುವುದು ಸರಿಯಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಜಗಳದಿಂದ ರೈತರಿಗೆ ನ್ಯಾಯ ಸಿಗುತ್ತಿಲ್ಲ. ಇದು ಬಹಳ ಬೇಸರ ಮೂಡಿಸುತ್ತದೆ ಎಂದರು.

ಇನ್ನಾದರೂ ಪ್ರಧಾನಿಯು ಮಧ್ಯಪ್ರವೇಶಿಸಿ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಇಲ್ಲಿನ ಉಷಾ ಕಾಲೊನಿಯ ಮಹಾಲಕ್ಷ್ಮಿ ದೇವಾಲಯ ಆವರಣದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಧರ್ಮಸಭೆ ಆರಂಭವಾಗಿದೆ.

ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಮಹಾಪೀಠದ ಚನ್ನಸಿದ್ಧರಾಮ ಪಂಡಿರಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಸಂಜಯ ಪಾಟೀಲ, ದೇವಸ್ಥಾನ ಧರ್ಮದರ್ಶಿ ಡಾ.ಪಿ. ಶಿವರಾಮ್, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯದೇವ ಹಿರೇಮಠ ಭಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.