ADVERTISEMENT

11ರಿಂದ ಆದಿಚುಂಚನಗಿರಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 20:53 IST
Last Updated 8 ಮಾರ್ಚ್ 2022, 20:53 IST
ಆದಿಚುಂಚನಗಿರಿ ಕಾಲಭೈರವಸ್ವಾಮಿ
ಆದಿಚುಂಚನಗಿರಿ ಕಾಲಭೈರವಸ್ವಾಮಿ   

ನಾಗಮಂಗಲ: ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಇದೇ11ರಿಂದ 19ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.11ರಂದು ಬೆಳಿಗ್ಗೆ 8.30ಕ್ಕೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಧರ್ಮಧ್ವಜ ಸ್ಥಾಪನೆ ಮೂಲಕ ಚಾಲನೆ ನೀಡಲಿದ್ದಾರೆ. ಬಳಿಕ, ನಾಂದಿಪೂಜೆ, 10.30ಕ್ಕೆ ಯುವಸಮ್ಮೇಳನ ನಡೆಯಲಿದೆ.

14ರಿಂದ ಬ್ಯಾಂಕಿಂಗ್‌ ಪರೀಕ್ಷೆಗೆ ತರಬೇತಿ

ಬೆಂಗಳೂರು: ಕೃಷಿಕ್‌ ಸರ್ವೋದಯ ಫೌಂಡೇಷನ್‌ ಇದೇ 14ರಿಂದ ಬ್ಯಾಂಕಿಂಗ್‌ ಪರೀಕ್ಷೆಗಾಗಿ ಆನ್‌ಲೈನ್‌ ಹಾಗೂ ಆಫ್‌ಲೈನ್‌ ತರಬೇತಿ ನೀಡಲು ನಿರ್ಧರಿಸಿದ್ದು ಇದಕ್ಕಾಗಿ ಅರ್ಜಿಗಳನ್ನು

ADVERTISEMENT

ಆಹ್ವಾನಿಸಿದೆ.

ಆಸಕ್ತರು ಇದೇ 12ರೊಳಗೆ ಹೆಸರು ನೋಂದಾಯಿಸಬೇಕು. ಮಾಹಿತಿಗಾಗಿ ನಂ.15, 2ನೇ ಹಂತ, ಎಚ್‌ಎಎಲ್‌ ಹಳೇ ವಿಮಾನ ನಿಲ್ದಾಣ ರಸ್ತೆ, ಗಾಲ್ಫ್‌ ಅವೆನ್ಯೂ ರಸ್ತೆ, ಕೋಡಿಹಳ್ಳಿ, ಬೆಂಗಳೂರು–08 ಅಥವಾ ಇ–ಮೇಲ್‌: ksfbangalore@gmail.com ಅಥವಾ ವೆಬ್‌ ವಿಳಾಸ: www.ksfkarnataka.com ಗೆ ಸಂಪರ್ಕಿಸಬಹುದು.

ಸಂಪರ್ಕಕ್ಕೆ: 7625000990 ಅಥವಾ 9740552965.

ವಿದ್ಯುತ್‌ ವ್ಯತ್ಯಯ

ಬೆಂಗಳೂರು:ವಿದ್ಯುತ್ಕೇಂದ್ರದಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 9ರಂದು ಅತ್ತಿಬೆಲೆ ಉಪಕೇಂದ್ರದ ವ್ಯಾಪ್ತಿಯಲ್ಲಿಅನಿಯಮಿತ ವಿದ್ಯುತ್ವ್ಯತ್ಯಯಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.‌

ವ್ಯತ್ಯಯಆಗಲಿರುವ ಸ್ಥಳಗಳು: ಅತ್ತಿಬೆಲೆ ಪಟ್ಟಣ, ಆನೇಕಲ್‌ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.