ADVERTISEMENT

ಹೆಚ್ಚುವರಿ ವಿಭಾಗ; ಅನುದಾನಿತ ಶಾಲೆಗಳಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 23:30 IST
Last Updated 20 ಏಪ್ರಿಲ್ 2023, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅನುದಾನಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ವಿಭಾಗಗಳನ್ನು ಆರಂಭಿಸಲು ಅನುಮತಿ ಪಡೆಯಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅವಕಾಶ ಕಲ್ಪಿಸಿದೆ.

ಹೆಚ್ಚುವರಿ ವಿಭಾಗಗಳನ್ನು ಶಾಶ್ವತ ಅನುದಾನರಹಿತ ಷರತ್ತಿಗೆ ಒಳಪಟ್ಟು ಆರಂಭಿಸಬೇಕು. ಸಮೀಪದ ಶಾಲೆಗಳ ಮಕ್ಕಳ ದಾಖಲಾತಿಗೆ ಧಕ್ಕೆಯಾಗಬಾರದು. ಹೆಚ್ಚುವರಿ ವಿಭಾಗಕ್ಕೆ ಅಗತ್ಯ ವಾದ ಮೂಲಸೌಕರ್ಯವನ್ನು ಒದಗಿಸಬೇಕು. ರ್ಹ ಶಿಕ್ಷಕರನ್ನು ನೇಮಿಸಕೊಳ್ಳ
ಬೇಕು ಎಂದು ನಿಬಂಧನೆಗಳನ್ನು ಹಾಕಲಾಗಿದ್ದು, ಅನುಮತಿ ನೀಡುವ ಅಧಿಕಾರವನ್ನು ಶಿಕ್ಷಣ ಇಲಾಖೆ ಆಯುಕ್ತಾಲಯದ ನಿರ್ದೇಶಕರಿಗೆ ನೀಡಲಾಗಿದೆ.

‘ಹೆಚ್ಚುವರಿ ವಿಭಾಗ’ ಅಧಿಕೃತ ಪಟ್ಟಿ ಕೈಬಿಡಲು ಆಗ್ರಹ: ‘ಹೆಚ್ಚುವರಿ ವಿಭಾಗ’ ಹೊಂದಿರುವ ಶಾಲೆಗಳನ್ನು ಅನಧಿಕೃತ ಶಾಲೆಗಳ ಪಟ್ಟಿಯಿಂದ ಕೈಬಿಡುವಂತೆ ಖಾಸಗಿ ಅನುದಾನ ರಹಿತ ಶಾಲೆಗಳು ಒತ್ತಾಯಿಸಿವೆ.

ADVERTISEMENT

‘ಇಲಾಖೆಯು ಈಚೆಗೆ 1,600 ಶಾಲೆ
ಗಳನ್ನು ಅನಧಿಕೃತ ಎಂದು ಪಟ್ಟಿ
ಮಾಡಿದೆ. ಅದರಲ್ಲಿ 620 ಶಾಲೆಗಳುಇಲಾಖೆಯ ಅನುಮೋದನೆ ಪಡೆಯದೆ ಹೆಚ್ಚುವರಿ ವಿಭಾಗ ಆರಂಭಿಸಿವೆ ಎನ್ನುವ ಕಾರಣಕ್ಕೆ ಅನಧಿಕೃತ ಎಂದು ಪಟ್ಟಿ ಮಾಡಲಾಗಿದೆ. 2006ರಲ್ಲಿ ಹೊರಡಿಸಿದ ಸರ್ಕಾರದ ಆದೇಶದ ಪ್ರಕಾರ ಹೆಚ್ಚುವರಿ ವಿಭಾಗಗಳನ್ನು ತೆರೆಯಲಾಗಿದೆ ಎಂದು ಹಿಂತೆಗೆದುಕೊಳ್ಳ
ಲಾಗಿಲ್ಲ. ಇದು ಪ್ರವೇಶದ ಸಮಯದಲ್ಲಿ ಪೋಷಕರಿಗೆ ತಪ್ಪು ಸಂದೇಶ ನೀಡುತ್ತಿದೆ. ಹಾಗಾಗಿ, ಅನಧಿಕೃತ ಶಾಲೆಗಳ ಪಟ್ಟಿಯಿಂದ ಕೈಬಿಡಬೇಕು’ ಶಾಲಾ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮ
ನ್ವಯ ಸಮಿತಿ (ಕೆಪಿಎಂಟಿಸಿಸಿ) ಸಂಚಾ
ಲಕ ಡಿ.ಶಶಿಕುಮಾರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.