ಬೆಂಗಳೂರು: ವಿಜಯಪುರ ಮತ್ತು ಕೊಡಗು ಸೈನಿಕ ಶಾಲೆಯಲ್ಲಿ 2020–21ನೇ ಸಾಲಿನ 6ನೇ (ಬಾಲಕರು ಮತ್ತು ಬಾಲಕಿಯರು) ಮತ್ತು 9ನೇ (ಬಾಲಕರಿಗೆ ಮಾತ್ರ) ತರಗತಿಗೆ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನ. 19 ಕೊನೆಯ ದಿನ. ಜನವರಿ 10ರಂದು ಪರೀಕ್ಷೆ ನಡೆಯಲಿದೆ. 2009 ಏಪ್ರಿಲ್ 1ರಿಂದ 2011 ಮಾರ್ಚ್ 31ರ ಮಧ್ಯೆ ಜನಿಸಿದವರು 6ನೇ ತರಗತಿಗೆ ಹಾಗೂ 2006 ಏಪ್ರಿಲ್ 1ರಿಂದ 2008 ಮಾರ್ಚ್ 31ರ ಮಧ್ಯೆ ಜನಿಸಿದವರು 9ನೇ ತರಗತಿಗೆ ಅರ್ಜಿ ಸಲ್ಲಿಸಲು ಅರ್ಹರು. ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿ ಗಳು ₹ 400, ಇತರರು ₹ 550 ಶುಲ್ಕ ಪಾವತಿಸಬೇಕು ಎಂದು ಪ್ರಕ ಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.