ADVERTISEMENT

ಬಲೂನು ಅವಘಡ: ಜಿ.ಪಂ. ಅಧ್ಯಕ್ಷೆ ಅಸ್ವಸ್ಥ

ಬಲೂನು ಊದುವಾಗ ಗ್ಲಿಸರಿನ್, ಶಾಂಪೂ ಮಿಶ್ರಣ ಸೇವನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 17:20 IST
Last Updated 4 ಜನವರಿ 2020, 17:20 IST
ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ
ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ   

ಬಾಗಲಕೋಟೆ: ಶಾಲಾ ಕಾರ್ಯಕ್ರಮದಲ್ಲಿ ಬಲೂನ್ ಊದುವಾಗ ಆಕಸ್ಮಿಕವಾಗಿ ಶಾಂಪೂ ಹಾಗೂ ಗ್ಲಿಸರಿನ್ ಮಿಶ್ರಣ (ಎಲಿಪೆಂಟ್ ಫೋಂ) ಹೊಟ್ಟೆಯೊಳಗೆ ಸೇರಿಅಸ್ವಸ್ಥಗೊಂಡ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲ್ಲೂಕಿನ ತುಳಸಿಗೇರಿಯ ಕುವೆಂಪು ಮಾದರಿ ಸರ್ಕಾರಿ ಶಾಲೆಯಲ್ಲಿ ಶನಿವಾರ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಅತಿಥಿಯಾಗಿದ್ದ ಬಾಯಕ್ಕ ಮೇಟಿ, ಬಲೂನು ಊದಿ ಸಮಾರಂಭ ಉದ್ಘಾಟಿಸಲು ಮುಂದಾದರು. ಈ ವೇಳೆ ಬಲೂನಿನ ಒಳಗಿದ್ದ ಶಾಂಪೂ ಹಾಗೂ ಗ್ಲಿಸರಿನ್ ಮಿಶ್ರಣ ಹೊಟ್ಟೆಯೊಳಗೆ ಸೇರಿದೆ. ಇದರಿಂದ ಎಂಟು ಬಾರಿ ವಾಂತಿಯಾಗಿದ್ದು,
ಹೊಟ್ಟೆ ನೋವಿನಿಂದ ಬಳಲಿದ್ದಾರೆ.

'ಬಾಯಕ್ಕ ಮೇಟಿ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು' ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.