ADVERTISEMENT

ಜಾತ್ರೆ: ಸಜ್ಜಾ ಕುಸಿದು 40 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:37 IST
Last Updated 24 ಏಪ್ರಿಲ್ 2019, 19:37 IST
ಸಜ್ಜಾ ಕುಸಿದಿರುವ ದೃಶ್ಯ
ಸಜ್ಜಾ ಕುಸಿದಿರುವ ದೃಶ್ಯ   

ಕುಣಿಗಲ್: ತಾಲ್ಲೂಕಿನ ಉಜ್ಜನಿ ಚೌಡೇಶ್ವರಿ ‌ಜಾತ್ರೆ ವೇಳೆ ಸಜ್ಜಾ ಕುಸಿದು 40 ಮಂದಿ ಗಾಯಗೊಂಡಿದ್ದಾರೆ.

ಜಾತ್ರೆ ಸಮಯದಲ್ಲಿ ನಿಡಸಾಲೆ ಚೌಡೇಶ್ವರಿ ಗ್ರಾಮಕ್ಕೆ ಬರುವುದು ವಾಡಿಕೆ. ಅದರಂತೆ ನಿಡಸಾಲೆ ಚೌಡೇಶ್ವರಿ ಬುಧವಾರ ಬೆಳಿಗ್ಗೆ ಗ್ರಾಮ ಪ್ರವೇಶಿಸಿದೆ. ಆ ಉತ್ಸವ ನೋಡಲು ಗೋವಿಂದಪ್ಪ ಎಂಬುವವರ ಹಳೇಮನೆಯ ಸಜ್ಜಾ ಮೇಲೆ ಜನರು ನಿಂತಿದ್ದರು. ಭಾರ ತಾಳದೆ ಸಜ್ಜಾ ಕುಸಿದು ಕೆಳಗೆ ನಿಂತಿದ್ದವರ ಮೇಲೆ ಬಿದ್ದರು.

ತಕ್ಷಣ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯದ್ದರು. ಸಂಬಂಧಿಕರ ರೋದನ ತೀವ್ರವಾಗಿತ್ತು. ಮದ್ದೂರು, ಮಂಡ್ಯ, ಹುಲಿಯೂರುದುರ್ಗ, ಕುಣಿಗಲ್ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಏ.9ರಿಂದ ಆರಂಭವಾಗಿದ್ದು ಏ.26ಕ್ಕೆ ಮುಕ್ತಾಯವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.