ADVERTISEMENT

ಸಿವಿಲ್‌ ಸರ್ವೀಸ್ ಬೋರ್ಡ್‌ ಶೀಘ್ರ ರಚನೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 14:11 IST
Last Updated 14 ಆಗಸ್ಟ್ 2025, 14:11 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ರಾಜ್ಯದಲ್ಲಿ ಸಿವಿಲ್‌ ಸರ್ವೀಸ್ ಬೋರ್ಡ್‌ ರಚನೆ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ, ಶೀಘ್ರವೇ ಅನುಷ್ಠಾನ ಮಾಡಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಪ್ರತಾಪ್‌ ಸಿಂಹ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2024ರ ಸೆಪ್ಟೆಂಬರ್‌ 26ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಸಿವಿಲ್‌ ಸರ್ವಿಸ್‌ ಬೋರ್ಡ್‌ ರಚಿಸುವುದಕ್ಕಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದರು.

ADVERTISEMENT

ಉಪ ಸಮಿತಿಯು ಹಲವು ಸಭೆಗಳನ್ನು ನಡೆಸಿ, ಸುದೀರ್ಘವಾಗಿ ಚರ್ಚಿಸಿ ವರದಿ ನೀಡಿದೆ. ಅವರ ಶಿಫಾರಸಿನ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

‘ಸುಪ್ರೀಂ ಕೋರ್ಟ್‌ ಆದೇಶದಂತೆ ಇದನ್ನು ಕೂಡಲೇ ಸ್ಥಾಪಿಸಬೇಕು’ ಎಂದು ಪ್ರತಾಪ್‌ ಸಿಂಹ ನಾಯಕ್‌ ಒತ್ತಾಯಿಸಿದರು. ‘ನಿಮ್ಮ ಗುಜರಾತ್‌ನಲ್ಲೂ ಇನ್ನೂ ಸ್ಥಾಪಿಸಿಲ್ಲ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದವರೂ ಸ್ಥಾಪಿಸಿಲ್ಲ. ನಾವೇ, ರಚನೆಯ ಪ್ರಕ್ರಿಯೆಯಲ್ಲಿ ಇಷ್ಟೊಂದು ಮುಂದೆ ಇದ್ದೇವೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ದೇಶದಲ್ಲಿ ಮೊದಲು ಸಿವಿಲ್‌ ಸರ್ವೀಸ್ ಬೋರ್ಡ್‌ ಸ್ಥಾಪನೆ ಮಾಡಿ ದೇಶಕ್ಕೇ ಮಾದರಿಯಾಗಬೇಕು’ ಎಂದು ಸಿ.ಟಿ. ರವಿ, ಪ್ರತಾಪ್‌ ಸಿಂಹ ನಾಯಕ್‌ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.