ADVERTISEMENT

ಹತಾಶೆಯಿಂದ ಸಿದ್ದರಾಮಯ್ಯ ಟೀಕೆ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 19:45 IST
Last Updated 22 ನವೆಂಬರ್ 2021, 19:45 IST
ಸಿ.ಟಿ. ರವಿ
ಸಿ.ಟಿ. ರವಿ   

ಶಿವಮೊಗ್ಗ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹತಾಶೆಗೆ ಒಳಗಾಗಿದ್ದಾರೆ. ಅವರ ಮಾತುಗಳಲ್ಲಿ ರಾಜಕೀಯ ಮುತ್ಸದ್ಧಿತನ ಕಾಣುತ್ತಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಮವಾರ ಕುಟುಕಿದರು.

ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿದ ಅವರು, ‘ನಾಲ್ಕು ಬಾರಿ ಮುಖ್ಯಮಂತ್ರಿ, ಎರಡು ಬಾರಿ ಪ್ರಧಾನಿಯಾದ ನರೇಂದ್ರ ಮೋದಿ ಅವರನ್ನು ಹೆಬ್ಬೆಟ್ಟಿನ ಪ್ರಧಾನಿ ಎನ್ನುತ್ತಾರೆ. ಜನಾದೇಶ ಯಾತ್ರೆಯನ್ನು ‘ಜನ ಬರ್ಬಾದ್‌ ಯಾತ್ರೆ’ ಎಂದು ಲೇವಡಿ ಮಾಡುತ್ತಿದ್ದಾರೆ. ಅವರ ಈ ಟೀಕೆ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸೋಲುವ ಹತಾಶೆಯಿಂದ ಅವರು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ.ಪ್ರಚಾರಕ್ಕಾಗಿ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ ಮುಖಂಡರು ಪ್ರಚಾರದ ಭ್ರಮೆಯಲ್ಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಚುನಾವಣೆ ಕಾರಣವಲ್ಲ. ದೇಶಒಡೆಯುವ ತುಕುಡೆ ಗ್ಯಾಂಗ್‌ಗಳ
ಚಿಂತನೆಗೆ ಬ್ರೇಕ್ ಹಾಕಲು ಮಸೂದೆ ಹಿಂಪಡೆದಿದ್ದಾರೆ. ಪ್ರಧಾನಿ ಕಾರ್ಯ ವೈಖರಿಬಗ್ಗೆ ಜನರಿಗೆ ವಿಶ್ವಾಸವಿದೆ. ಈ ಕಾಯ್ದೆಗಳಲ್ಲೂ ರೈತರಿಗೆ ಹಾನಿಯಾಗುವ ಯಾವುದೇ ಅಂಶವಿರಲಿಲ್ಲ’ ಎಂದು ಅವರು
ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.