ADVERTISEMENT

ಮುಸ್ಲಿಮರಿಗೆ ಹಿಂದೂ ದಂಪತಿ ಆಶ್ರಯ: ಇದು ಕರ್ನಾಟಕ ಮಾದರಿ ಎಂದ ದಿನೇಶ್ ಗುಂಡೂರಾವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2022, 11:00 IST
Last Updated 6 ಆಗಸ್ಟ್ 2022, 11:00 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ಬೆಂಗಳೂರು: ಪ್ರವಾಹದಿಂದ ನಿರಾಶ್ರಿತರಾದ ಮುಸ್ಲಿಮರಿಗೆ ಆಶ್ರಯ ನೀಡಿರುವ ಹಿಂದೂ ದಂಪತಿಗಳ ನಡೆ ಅಭಿನಂದನಾರ್ಹ ಎಂದು ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಈ ವಿಚಾರವಾಗಿ ‘ಪ್ರಜಾವಾಣಿ’ ಪ್ರಕಟಿಸಿರುವ ವರದಿಯನ್ನು ಟ್ವೀಟ್‌ ಮಾಡಿರುವ ಅವರು, ‘ನೆರೆಯಲ್ಲಿ ನಿರಾಶ್ರಿತರಾದ 4 ಮುಸ್ಲಿಂ ಕುಟುಂಬಗಳಿಗೆ ಆಶ್ರಯ ನೀಡಿರುವ ಮಂಡ್ಯದ ಸಿದ್ದರಾಮು-ಆಶಾ ದಂಪತಿ ನಡೆ ಅಭಿನಂದನಾರ್ಹ’ ಎಂದು ಹೇಳಿದ್ದಾರೆ.

ಇದೇ ವೇಳೆ ಸಿಎಂ ಬೊಮ್ಮಾಯಿ ವಿರುದ್ಧ ಹರಿಹಾಯ್ದಿರುವ ದಿನೇಶ್ ಗುಂಡೂರಾವ್, ‘ಮಾನವೀಯತೆಗಿಂತ ಮೀಗಿಲಾದ ಧರ್ಮವಿಲ್ಲ. ಬೊಮ್ಮಾಯಿ ಅವರೇ, ಇದೇ ನಿಜವಾದ ಕರ್ನಾಟಕ ಮಾದರಿ. ಬುಲ್ಡೋಜರ್ ಹತ್ತಿಸುವ ಯೋಗಿ ಮಾದರಿ ನಿಮಗೆ ಉತ್ತಮವೋ?’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿರುವ ನಗರದ ಬೀಡಿ ಕಾರ್ಮಿಕರ ಕಾಲೊನಿಯ ನಾಲ್ಕು ಮುಸ್ಲಿಂ ಕುಟುಂಬಗಳಿಗೆ ಅದೇ ಬಡಾವಣೆಯ ಆಶಾ–ಸಿದ್ದರಾಮು ದಂಪತಿ ಐದು ದಿನದಿಂದ ಆಶ್ರಯ ನೀಡಿದ್ದಾರೆ. ಸಣ್ಣ ಮನೆಯಲ್ಲೇ ಸಂಕಷ್ಟದಲ್ಲಿರುವವರ ಕಾಳಜಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.