ADVERTISEMENT

ಪರೀಕ್ಷೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 19:27 IST
Last Updated 21 ಜನವರಿ 2019, 19:27 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಿಂದ ಜ.22ರಂದು ನಡೆಯಬೇಕಿದ್ದ ಎಂ.ಇಡಿ, ಬಿ.ಎ.ಎಲ್‌.ಎಲ್‌.ಬಿ. ಪರೀಕ್ಷೆಗಳನ್ನು ಜ.23ಕ್ಕೆ, ಎಂ.ಎಸ್‌.ಡಬ್ಲ್ಯೂ, ಎಂ.ಸಿ.ಎ. ಪರೀಕ್ಷೆಗಳನ್ನು ಜ.24ಕ್ಕೆ ಹಾಗೂ ಎಂ.ಎಸ್ಸಿ ಪರೀಕ್ಷೆಗಳನ್ನು ಜ.29ಕ್ಕೆ ಮುಂದೂಡಲಾಗಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಜ.28ಕ್ಕೆ ಮುಂದೂಡಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗವು ಜ.22ರಂದು ನಡೆಸಬೇಕಾಗಿದ್ದ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಫೆ.1ಕ್ಕೆ ಮುಂದೂಡಿದೆ. ಹಾಗೆಯೇ ನಿಲಯ ಪಾಲಕರ ನೇಮಕಾತಿ ಪರೀಕ್ಷೆ ಜ.30ಕ್ಕೆ, ಚಿತ್ರಕಲಾ ಶಿಕ್ಷಕರ ಪರೀಕ್ಷೆಯನ್ನು ಜ.28ಕ್ಕೆ (ಮೂಲ ದಾಖಲೆಗಳ ಪರಿಶೀಲನೆ) ಹಾಗೂ ಮೋಟಾರು ವಾಹನ ನಿರೀಕ್ಷಕರ ದೈಹಿಕದಾರ್ಢ್ಯತೆ ಪರೀಕ್ಷೆಯನ್ನು ಫೆ.5ಕ್ಕೆ ಮುಂದೂಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.