ADVERTISEMENT

ಅಭ್ಯರ್ಥಿಗಳೇ ಶುಲ್ಕ ಭರಿಸಬೇಕು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 17:13 IST
Last Updated 8 ಸೆಪ್ಟೆಂಬರ್ 2020, 17:13 IST

ಬೆಂಗಳೂರು: ರಾಜ್ಯ ಸಿವಿಲ್‌ ಸೇವೆಗಳ ಹುದ್ದೆಗಳಿಗೆ ಆಯ್ಕೆಯಾಗುವವರ ಅಂಕಪಟ್ಟಿ ಮತ್ತು ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜತೆ ಪರಿಶೀಲನೆಗೆ ವಿಶ್ವವಿದ್ಯಾಲಯ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ದಾಖಲೆಗಳನ್ನು ಕಳುಹಿಸುವ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.

ನೇಮಕಾತಿ, ಆಯ್ಕೆ ಪ್ರಾಧಿಕಾರಗಳು ನೇಮಕಾತಿಗಾಗಿ ಅಧಿಸೂಚನೆ ಹೊರಡಿಸುವ ಮುನ್ನವೇ ಅದಕ್ಕಾಗಿ ತಗಲುವ ಶುಲ್ಕವನ್ನು ಲೆಕ್ಕ ಹಾಕಿ ಅರ್ಜಿ ಶುಲ್ಕದೊಂದಿಗೆ ಸೇರಿಸಿಯೇ ಜಾಹಿರಾತು ನೀಡಬೇಕು ಎಂದೂ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT