ADVERTISEMENT

ಶನಿವಾರವೂ ಕೋರ್ಟ್ ಕಲಾಪ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 20:18 IST
Last Updated 28 ಡಿಸೆಂಬರ್ 2020, 20:18 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಸಾಂಕ್ರಾಮಿಕ ರೋಗದ ಕಾರಣದಿಂದ ಕಲಾಪಗಳು ಕಡಿಮೆಯಾಗಿದ್ದರಿಂದ ಅದನ್ನು ಸರಿದೂಗಿಸಲು 2021ನೇ ಸಾಲಿನಲ್ಲಿ ಶನಿವಾರದಂದೂ ಕಲಾಪಗಳು ನಡೆಯಲಿವೆ.

ಒಟ್ಟು 11 ಶನಿವಾರ ಕಲಾಪಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ನೋಟಿಸ್ ‍ಹೊರಡಿಸಿದ್ದಾರೆ.

ಅದರ ಪ್ರಕಾರ ಜನವರಿ 16, ಫೆ.6, ಮಾ.6, ಏ.17, ಮೇ 29, ಜೂನ್ 19, ಆ.7, ಸೆ.4, ಅ.23 ಮತ್ತು ಡಿ.18ರಂದು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಹೈಕೋರ್ಟ್‌ ಪೀಠಗಳಲ್ಲಿ ಕಲಾಪ ನಡೆಯಲಿದೆ.

ADVERTISEMENT

ಹೈಕೋರ್ಟ್‌ ಪೀಠಗಳಲ್ಲಿ ಸಾಮಾನ್ಯವಾಗಿ ಶನಿವಾರ ಕಲಾಪಗಳು ನಡೆಯುವುದಿಲ್ಲ. ಅಧೀನ ನ್ಯಾಯಾಲಯಗಳಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರ ಬಿಟ್ಟು ಉಳಿದ ಶನಿವಾರ ಕಲಾಪಗಳು ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.