ADVERTISEMENT

ನೆಡುತೋಪು ಯೋಜನೆ ಜಾರಿಗೆ ಗಡುವು: ಕೆಆರ್‌ಡಿಸಿಎಲ್‌ಗೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 4:04 IST
Last Updated 14 ಜುಲೈ 2022, 4:04 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು: 'ರಸ್ತೆ ಅಭಿವೃದ್ಧಿ ಯೋಜನೆಗೆ ಅಡ್ಡಿಯಾಗುವ ಮರಗಳನ್ನು ಕತ್ತರಿಸಿದರೆ ಅದಕ್ಕೆ ಪರ್ಯಾಯವಾಗಿ ಸಸಿ ನೆಡುವ ಯೋಜನೆಯನ್ನು ಆರು ವಾರಗಳಲ್ಲಿ ಜಾರಿಗೆ ತರಬೇಕು' ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್‌) ಹೈಕೋರ್ಟ್ ನಿರ್ದೇಶಿಸಿದೆ.

ಮೆಟ್ರೊ ಯೋಜನೆಗೆ ಮರ ಕಡಿಯು ವುದನ್ನು ಪ್ರಶ್ನಿಸಿ ಪರಿಸರವಾದಿ ಟಿ.ದತ್ತಾತ್ರೇಯ ದೇವರೆಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ‘ಪ್ರಕರಣಕ್ಕೆ ಸಂಬಂಧಿಸಿದಂತೆರಸ್ತೆ ಅಭಿವೃದ್ಧಿ ಯೋಜನೆಗಾಗಿ ಕತ್ತರಿಸುವ 91 ಬೃಹತ್ ಮರಗಳಿಗೆ ಪರ್ಯಾಯವಾಗಿ 2,693 ಸಸಿಗಳನ್ನು ನೆಡುವ ನೆಡುತೋಪು ಯೋಜನೆಯನ್ನು 6 ವಾರಗಳಲ್ಲಿ ಜಾರಿ ಗೊಳಿಸಬೇಕು ಮತ್ತು ಈ ಕುರಿತ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು' ಎಂದು ಹೇಳಿತು.

ಅನುಮತಿ: ಸಿಲ್ಕ್ ಬೋರ್ಡ್ ಸಿಗ್ನಲ್ ಮತ್ತು ಕಾಡುಬೀಸನಹಳ್ಳಿ ಜಂಕ್ಷನ್ ನಡುವೆ ಮೆಟ್ರೊ ರೈಲು ಯೋಜನೆಗಾಗಿ 14 ಮರಗಳನ್ನು ಮತ್ತು ವೆಲ್ಲರಾ ಜಂಕ್ಷನ್ ಮತ್ತು ರಾಷ್ಟ್ರೀಯ ಸೈನಿಕ ಶಾಲೆ ಪ್ರದೇಶದಲ್ಲಿ 7 ಮರಗಳನ್ನು ಕತ್ತರಿಸಲು ಮರ ಅಧಿಕಾರಿ (ಟ್ರೀ ಆಫೀಸರ್) ನೀಡಿರುವ ಅನುಮತಿ ಜಾರಿಗೊಳಿಸಲು ನ್ಯಾಯಪೀಠವು ಬಿಎಂಆರ್‌ಸಿಎಲ್‌ಗೆ ಅಸ್ತು ಎಂದಿದೆ.

ADVERTISEMENT

ಬೆಂಗಳೂರು ಕೃಷಿ ವಿವಿ ಶಿಫಾರಸು ಮಾಡಿರುವ ‘ಬಿಎಂಆರ್‌ಸಿಎಲ್ ಪರಿ ಹಾರ ಪ್ಲಾಂಟೇಶನ್ ಯೋಜನೆ ಯನ್ನೂ ಜಾರಿಗೊಳಿಸಬೇಕು' ಎಂದು ಕೋರ್ಟ್‌ ಬಿಎಂಆರ್‌ಸಿಎಲ್‌ಗೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.