ADVERTISEMENT

ಬಾಣಂತಿ, ಹಸುಗೂಸನ್ನು ಮನೆಗೆ ತಲುಪಿಸಿದ ಜಿ.ಪಂ.ಅಧ್ಯಕ್ಷೆ

ಮಾನವೀಯತೆ ಮೆರೆದ ಸುಜಾತಾ ಕಳ್ಳಿಮನಿಗೆ ಕುಟುಂಬದವರಿಂದ ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 16:58 IST
Last Updated 7 ಏಪ್ರಿಲ್ 2021, 16:58 IST
ಮುಷ್ಕರದ ಹಿನ್ನೆಲೆಯಲ್ಲಿ ಊರಿಗೆ ತೆರಳಲಾಗದೇ ವಿಜಯಪುರ ಬಸ್‌ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಬಾಳಂತಿ, ಮಗುವನ್ನು ತಮ್ಮ ಕಾರಿನಲ್ಲೇ ಮನೆಗೆ ಬಿಟ್ಟುಬಂದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ
ಮುಷ್ಕರದ ಹಿನ್ನೆಲೆಯಲ್ಲಿ ಊರಿಗೆ ತೆರಳಲಾಗದೇ ವಿಜಯಪುರ ಬಸ್‌ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಬಾಳಂತಿ, ಮಗುವನ್ನು ತಮ್ಮ ಕಾರಿನಲ್ಲೇ ಮನೆಗೆ ಬಿಟ್ಟುಬಂದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ   

ವಿಜಯಪುರ: ಊರಿಗೆ ತೆರಳಲು ಬಸ್‌ ಇಲ್ಲದೇ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿಒಂದೂವರೆ ತಿಂಗಳ ಹಸುಗೂಸಿನೊಂದಿಗೆಗೋಳಾಡುತ್ತಿದ್ದ ಬಾಳಂತಿಯನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ಅವರು ತಮ್ಮ ಸರ್ಕಾರಿ ಕಾರಿನಲ್ಲೇ ಕರೆದುಕೊಂಡು ಹೋಗಿ ಮನೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇಂಡಿ ತಾಲ್ಲೂಕಿನ ಲಾಳಸಂಗಿ ಗ್ರಾಮದ ಬಾಳಂತಿ ಸಾವಿತ್ರಿ ಬಡಿಗೇರ ಮಗುವಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಬಂದಿದ್ದರು. ಆದರೆ, ಮುಷ್ಕರದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಮರಳಲು ಬಸ್‌ ಇಲ್ಲದೇ ಪರದಾಡುತ್ತಿರುವುದನ್ನು ತಿಳಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ತಮ್ಮ ಸರ್ಕಾರಿ ಇನೊವಾ ಕಾರಿನಲ್ಲಿ ಬಾಣಂತಿ, ಮಗುವನ್ನು ಕೂರಿಸಿಕೊಂಡು ಹೋಗಿ ಮನೆಗೆ ಸುರಕ್ಷಿತವಾಗಿ ಬಿಟ್ಟು ಬಂದರು.

ಅಧ್ಯಕ್ಷೆಯ ಸಾಮಾಜಿಕ ಕಾಳಜಿ ಕಂಡ ಕುಟುಂಬದವರು ಹಾಗೂ ಗ್ರಾಮಸ್ಥರು ಸನ್ಮಾನ ಮಾಡಿ ಕಳುಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.