ADVERTISEMENT

ಮಧುರಾ ವೀಣಾ ಸೇರಿ 26 ಮಂದಿಗೆ ಐಪಿಎಸ್‌ ಬಡ್ತಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 19:51 IST
Last Updated 10 ಡಿಸೆಂಬರ್ 2021, 19:51 IST
ಮಧುರಾ ವೀಣಾ
ಮಧುರಾ ವೀಣಾ   

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್‌ ಸೇವೆಯ (ಕೆಎಸ್‌ಪಿಎಸ್‌) 26 ಅಧಿಕಾರಿಗಳನ್ನು ಭಾರತೀಯ ಪೊಲೀಸ್‌ ಸೇವೆಗೆ (ಐಪಿಎಸ್‌) ಬಡ್ತಿ ನೀಡಿ ಪ್ರೊಬೇಷನರಿಯಾಗಿ ನೇಮಕ ಮಾಡಲಾಗಿದೆ.

ಬಡ್ತಿ ಪಡೆದವರಲ್ಲಿ ಮಧುರಾ ವೀಣಾ ವಿರುದ್ಧ ಹಣ ವಸೂಲಿಯ ಆರೋಪ ಇತ್ತು. 2016ರಲ್ಲಿ ಇವರು ಸಿಐಡಿ ಮಾನವ ಸಾಗಣೆ ನಿಗ್ರಹದ ಘಟಕದ ಎಸ್ಪಿ ಆಗಿದ್ದಾಗ ನಗರದ ಐಷಾರಾಮಿ ಹೋಟೆಲ್‌ವೊಂದರ ಮೇಲೆ ದಾಳಿ ನಡೆಸಿ, ಹೋಟೆಲ್‌ ಮಾಲೀಕರಿಗೆ ಬೆದರಿಸಿ ₹2 ಲಕ್ಷ ವಸೂಲಿ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಈ ಪ್ರಕರಣದ ಬಗ್ಗೆ ಸೋನಿಯಾ ನಾರಂಗ್‌ ತನಿಖೆ
ನಡೆಸಿದ್ದರು.

ಮತ್ತೊಬ್ಬ ಅಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರನ್ನುಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಹತ್ಯೆ ನಡೆದಾಗ ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ (ಅಪರಾಧ) ಆಗಿ ಕೆಲಸ ಮಾಡುತ್ತಿದ್ದರು. ಅದೇ ಕಾರಣಕ್ಕೆ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಬರುವಂತೆ ಬಾಲದಂಡಿಗೆ ನೋಟಿಸ್
ನೀಡಿದ್ದರು.

ADVERTISEMENT

ಬಡ್ತಿ ಪಡೆದ ಅಧಿಕಾರಿಗಳು:2016ರ ಪಟ್ಟಿಯಲ್ಲಿಎಂ.ವಿ ಚಂದ್ರಕಾಂತ್‌, ಎಂ.ಎಲ್‌.ಮಧುರಾ ವೀಣಾ. 2017ರ ಪಟ್ಟಿಯಲ್ಲಿ ಚನ್ನಬಸವಣ್ಣ ಲಂಗೋಟಿ, ಜಯಪ್ರಕಾಶ್‌, ಕೆ.ಪಿ.ಅಂಜಲಿ, ಎಂ.ನಾರಾಯಣ, ಎಂ.ಮುತ್ತುರಾಜು, ಎಚ್‌.ಟಿ.ಶೇಖರ್, ರವೀಂದ್ರ ಕಾಶೀನಾಥ್‌ ಗಡಾದಿ, ಅನಿತಾ ಭೀಮಪ್ಪ ಹದ್ದಣ್ಣನವರ್, ಎ. ಕುಮಾರಸ್ವಾಮಿ, ಸಾರಾ ಫಾತಿಮಾ, ರಶ್ಮಿ ಪರಡ್ಡಿ, ಎಂ.ಎ.ಅಯ್ಯಪ್ಪ ಸೇರಿದ್ದಾರೆ.

2019ರ ಪಟ್ಟಿಯಲ್ಲಿ ಶಿವಕುಮಾರ್‌, ಮಲ್ಲಿಕಾರ್ಜುನ ಬಾಲದಂಡಿ, ವೈ.ಅಮರನಾಥ್‌ ರೆಡ್ಡಿ, ಪವನ್‌ ನೆಜ್ಜೂರು, ಬಿ.ಎಲ್‌.ಶ್ರೀಹರಿಬಾಬು,ಎಂ.ಎಸ್‌.ಗೀತಾ, ಯಶೋಧಾ ವಂಟಗೋಡಿ, ಎಂ. ರಾಜೀವ್‌, ವಿ.ಜೆ.ಶೋಭಾರಾಣಿ, ಡಾ.ಎಸ್‌.ಕೆ.ಸೌಮ್ಯಲತಾ, ಬಿ.ಟಿ. ಕವಿತಾ ಮತ್ತು ಉಮಾ ಪ್ರಶಾಂತ್‌ ಬಡ್ತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.