ADVERTISEMENT

ಜೆಡಿಎಸ್‌: ಗೌಡರ ಕುಟುಂಬದ 10 ಮಂದಿ ತಾರಾ ಪ್ರಚಾರಕರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 20:17 IST
Last Updated 2 ಏಪ್ರಿಲ್ 2019, 20:17 IST

ಬೆಂಗಳೂರು: ಲೋಕಸಭಾ ಚುನಾವಣೆಗೆ 40 ಮಂದಿ ತಾರಾ ಪ್ರಚಾರಕರ ಪಟ್ಟಿಯನ್ನು ಜೆಡಿಎಸ್‌ ಬಿಡುಗಡೆ ಮಾಡಿದೆ. ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬದ 10 ಸದಸ್ಯರಿಗೆ (ಇಬ್ಬರು ಬೀಗರು ಸೇರಿ) ತಾರಾ ‍ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.

ಎಚ್.ಡಿ.ದೇವೇಗೌಡ (ತುಮಕೂರು), ನಿಖಿಲ್‌ ಕುಮಾರಸ್ವಾಮಿ (ಮಂಡ್ಯ) ಹಾಗೂ ‍ಪ್ರಜ್ವಲ್ ರೇವಣ್ಣ (ಮಂಡ್ಯ) ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದು, ಪಟ್ಟಿಯಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ. ಪಟ್ಟಿಯಲ್ಲಿ ದೇವೇಗೌಡರ ಹೆಸರು ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಿಕ್ಕಿದೆ. ಅವರಿಬ್ಬರು ಪ್ರಚಾರದ ನೇತೃತ್ವ ವಹಿಸಲಿದ್ದು, ಸಚಿವರು, ಶಾಸಕರು, ವಿಧಾನ ‍ಪರಿಷತ್‌ ಸದಸ್ಯರು, ಸಂಸದರು, ಮಾಜಿ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳಿಗೆ ಸ್ಥಾನ ಸಿಕ್ಕಿದೆ.

ಸಚಿವರಾದ ಎಚ್‌.ಡಿ.ರೇವಣ್ಣ, ಡಿ.ಸಿ.ತಮ್ಮಣ್ಣ ಹಾಗೂ ಪ್ರೊ.ಕೆ.ಎಸ್‌.ರಂಗಪ್ಪ (ಇಬ್ಬರು ಬೀಗರು), ಶಾಸಕಿ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ಡಾ.ಸೂರಜ್‌ ರೇವಣ್ಣ ಅವರ ಹೆಸರುಗಳು ‍ಪಟ್ಟಿಯಲ್ಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.