ADVERTISEMENT

ಗಣರಾಜ್ಯೋತ್ಸವ ಪರೇಡ್‌ಗೆ ಶ್ರೀಷ್ಮಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 21:16 IST
Last Updated 23 ಜನವರಿ 2020, 21:16 IST
ಪೂರ್ವ ತಯಾರಿಯಲ್ಲಿ ಶ‍್ರೀಷ್ಮಾ ಹೆಗ್ಡೆ.
ಪೂರ್ವ ತಯಾರಿಯಲ್ಲಿ ಶ‍್ರೀಷ್ಮಾ ಹೆಗ್ಡೆ.   

ಹರಿಹರ: ನಗರದ ಶ‍್ರೀಷ್ಮಾ ಹೆಗ್ಡೆ ಜ. 26ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಎನ್‍ಸಿಸಿ ಪರೇಡ್‍ನ ಮುಂದಾಳತ್ವ ವಹಿಸಲಿದ್ದಾರೆ.

ನಗರದ ವೈದ್ಯರಾದ ಡಾ.ಪ್ರವೀಣ್ ಹೆಗ್ಡೆ ಹಾಗೂ ಬಿಂದು ಹೆಗ್ಡೆ ದಂಪತಿಯ ಪುತ್ರಿಯಾದ ಇವರು ಸಮೀಪದ ಕುಮಾರಪಟ್ಟಣದ ಆದಿತ್ಯ ಬಿರ್ಲಾ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ.

ಎನ್‌ಸಿಸಿ ವಿದ್ಯಾರ್ಥಿನಿಯಾದ ಶ್ರೀಷ್ಮಾ ದೆಹಲಿಯ ಗಣರಾಜ್ಯೋತ್ಸವದ ಎನ್‌ಸಿಸಿ ಪರೇಡ್‌ಗೆ ಆಯ್ಕೆಯಾಗಿದ್ದರು. ಅವರ ಕಾರ್ಯಕ್ಷಮತೆ ಹಾಗೂ ನಾಯಕತ್ವ ಗುಣ ಗಮನಿಸಿದ ಎನ್‌ಸಿಸಿ ಅಧಿಕಾರಿಗಳು, ತಂಡದ ನೇತೃತ್ವ ನೀಡಿದ್ದಾರೆ. ಜ. 26ರಂದು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಎನ್‌ಸಿಸಿ ಪರೇಡ್‌ನ ಮುಂದಾಳತ್ವ ವಹಿಸಲಿದ್ದಾರೆ.

ADVERTISEMENT

2017ರ ದೆಹಲಿ ಗಣರಾಜ್ಯೋತ್ಸದ ಪರೇಡ್‌ನಲ್ಲಿ ಕೊಡಗಿನ ಐಶ್ವರ್ಯ ಅವರು ಎನ್‌ಸಿಸಿ ತಂಡದ ಮುಂದಾಳತ್ವ ವಹಿಸಿದ್ದರು. ಮೂರು ವರ್ಷಗಳ ನಂತರ ಮತ್ತೊಮ್ಮೆ ರಾಜ್ಯದ ಹುಡುಗಿಗೆ ಈ ಅವಕಾಶ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.