ADVERTISEMENT

ರೆಸಾರ್ಟ್‌ಗೆ ತೆರಳಿ ಒಗ್ಗಟ್ಟು ಕಾಪಾಡಿಕೊಳ್ಳಲು ಜೆಡಿಎಸ್ ಚಿಂತನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 5:19 IST
Last Updated 8 ಜುಲೈ 2019, 5:19 IST
   

ಬೆಂಗಳೂರು: ‘ಸರ್ಕಾರ ಉಳಿಸುವುದು ನಮ್ಮ ಮೊದಲ ಆದ್ಯತೆ. ನೀವೆಲ್ಲರೂ ಒಗ್ಗಟ್ಟಾಗಿರಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ’ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ನಿನ್ನೆ ತಡರಾತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮೊಡನೆ ಮಾತನಾಡಿದರು ಎಂದು ಹೇಳಿದ ಜಿ.ಟಿ.ದೇವೇಗೌಡ, ‘ಸರ್ಕಾರ ಗಟ್ಟಿಯಾಗಿದೆ. ನೀವೆಲ್ಲವೂ ಒಗ್ಗಟ್ಟಾಗಿರಿ, ಒಟ್ಟಾಗಿರಿ. ನಮ್ಮ ಮೂವರು ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ. ಇನ್ನೂ ಹಲವರನ್ನು ಸೆಳೆಯಲು ಪ್ರಯತ್ನ ಮಾಡ್ತಿದ್ದಾರೆ. ಸರ್ಕಾರ ಉಳಿಸೋಣ. ನೀವೇನೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಕುಮಾರಸ್ವಾಮಿ ಅವರ ಮಾತುಗಳನ್ನು ಉಲ್ಲೇಖಿಸಿದರು.

‘ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡು ಪಕ್ಷ ಬಿಟ್ಟು ಹೋಗಿರುವವರಿಗೆ ಅಧಿಕಾರಿ ಕೊಡುವ ಭರವಸೆ ಕೊಟ್ಟು ವಾಪಾಸ್ ಕರೆತರೋಣ. ನಮ್ಮ ಶಾಸಕರನ್ನು ಕರೆತರಲು ಕಾಂಗ್ರೆಸ್ ಹೆಚ್ಚು ಯೋಚಿಸುವುದು ಬೇಡ. ಅವರ ಶಾಸಕರನ್ನು ಉಳಿಸಿಕೊಳ್ಳುವ ಕಡೆಗೆ ಗಮನ ಕೊಡಲಿ ಎಂದು ಕುಮಾರಸ್ವಾಮಿಅತೃಪ್ತ ಶಾಸಕರ ಮನವೊಲಿಕೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ ಎಂದು ದೇವೇಗೌಡ ನುಡಿದರು.ನನ್ನ ಜವಾಬ್ದಾರಿ’ ಎಂದು ಕುಮಾರಸ್ವಾಮಿ ಹೇಳಿದರು.

ADVERTISEMENT

ಜೆಡಿಎಸ್ ಶಾಸಕರಿಗೆ ಅಗತ್ಯ ಎನಿಸಿದರೆ ಎಲ್ಲರೂ ಎರಡು ದಿನ ಎಲ್ಲಿಗಾದರೂ ರೆಸಾರ್ಟ್‌ಗೆ ಹೋಗಿ ಬನ್ನಿ ಎಂದು ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ ಎಂದು ದೇವೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.