ADVERTISEMENT

ಕಾಂಗ್ರೆಸ್‌ ಭ್ರಷ್ಟರ ಪಕ್ಷ: ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 21:54 IST
Last Updated 2 ಅಕ್ಟೋಬರ್ 2022, 21:54 IST
ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌
ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌   

ಬೆಂಗಳೂರು: ‘ಕಾಂಗ್ರೆಸ್‌ ದೇಶದ್ರೋಹಿಗಳು ಮತ್ತು ಭ್ರಷ್ಟಾಚಾರಿಗಳ ಪಕ್ಷ’ ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಆರೋಪಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಹುಲ್‌ ಗಾಂಧಿಯವರು ಕರ್ನಾಟಕ ಸರ್ಕಾರವನ್ನು ಶೇ 40 ಕಮಿಷನ್ ಸರ್ಕಾರ ಎಂದು ಹೇಳಿದ್ದಾರೆ. ‘ಕಬ್ಬಿಣದ ಕಾಲಿನ’ ರಾಹುಲ್‌ ಅವರು ಇದಕ್ಕೆ ಆಧಾರ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ರಾಹುಲ್‌ ಅವರಿಗೆ ಕೆಲವು ಪ್ರಶ್ನೆಗಳನ್ನೂ ಕೇಳಿದ್ದಾರೆ.

l ‘ನಿಮ್ಮ ಕುಟುಂಬದ ಪಕ್ಷ 1947 ರಲ್ಲಿ ದೇಶವನ್ನು ವಿಭಜಿಸಿ ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಿದ್ದಕ್ಕೆ ಮತ್ತು ಹಿಂದುಗಳಿಗೆ ಹಿಂದೂಸ್ತಾನ ಕೊಡದೇ ಇದ್ದ ಕಾರಣಕ್ಕೆ ಪಾಪದ ಪ್ರಾಯಶ್ಚಿತ ಪಾದಯಾತ್ರೆಯಾ?’

ADVERTISEMENT

l ‘ನಿಮ್ಮ ಒಡೆದು ಹೋಗಿರುವ ಮನಸ್ಸುಗಳಿಂದ ಮತ್ತು ನಿಮ್ಮ ಪಕ್ಷದಿಂದ ಭಾರತವನ್ನು ಜೋಡಿಸಲು ಸಾಧ್ಯವಾ? ಅಖಂಡ ಭಾರತವನ್ನು ತುಂಡು ಮಾಡಿದ ನಿಮ್ಮ ಪಕ್ಷ, ನಿಮ್ಮ ಕುಟುಂಬ 75 ವರ್ಷಗಳ ಬಳಿಕ ಈಗ ಭಾರತ್‌ ಜೋಡೊ ಮಾಡಲು ಹೊರಟಿದ್ದೀರಿ. ಒಡೆದ ಭಾರತವನ್ನು ನಿಮ್ಮಿಂದ ಜೋಡಿಸಲು ಸಾಧ್ಯವಾ?’

l ‘ದೇಶವನ್ನು ಲೂಟಿ ಮಾಡಿದವರು ನಿಮ್ಮ ಪಕ್ಷದವರು ಮತ್ತು ನಿಮ್ಮ ಕುಟುಂಬದವರಲ್ಲವೇ? ನೆಹರೂ ಸಂಪುಟದಿಂದ ಶ್ಯಾಮಪ್ರಸಾದ್‌ ಮುಖರ್ಜಿ ರಾಜೀನಾಮೆ ನೀಡಿದ್ದು ಏಕೆ? ಅಂಬೇಡ್ಕರ್‌ ಅವರು ತಾವು ಜೀವಂತ ಇರುವವರೆಗೂ ಕಾಂಗ್ರೆಸ್‌ ಪಕ್ಷ ಸೇರಲಾರೆ, ಕಾಂಗ್ರೆಸ್‌ ಎನ್ನುವುದು ಒಂದು ಉರಿಯುವ ಮನೆ ಎಂದಿದ್ದು ಏಕೆ?’

l ‘ಕರ್ನಾಟಕದಲ್ಲಿ ನಿಮ್ಮ ಪಕ್ಷದ ಡಿ.ಕೆ.ಶಿವಕುಮಾರ್‌– ಸಿದ್ದರಾಮಯ್ಯ ಅವರನ್ನು ಜೋಡಿಸಲಾಗದ ನಿಮಗೆ ಭಾರತವನ್ನು ಜೋಡಿಸಲು ಸಾಧ್ಯವೇ? ನೀವು ಕರ್ನಾಟಕವನ್ನು ಜೋಡಿಸಬಲ್ಲಿರಾ?’

l ‘ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಭಾರತವನ್ನು ಜೋಡಿಸುವ ಪ್ರಾಮಾಣಿಕ ಉದ್ದೇಶವಿದ್ದರೆ ಮುಂದಿನ ಚುನಾವಣೆಯಲ್ಲಿ ಸಮಾನತೆಯನ್ನು ತರಲು ಹಿಂದು– ಮುಸ್ಲಿಂ ಸಮಾನರು ಎಂಬ ಕಾನೂನೂ ತರುತ್ತೇವೆ ಎಂದು ಘೋಷಣೆ ಮಾಡುವಿರಾ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.