ADVERTISEMENT

ಬೀಳುವ ಹಂತದಲ್ಲಿ ಕಸಾಪ ಕಚೇರಿ!

ತೆರವುಗೊಳಿಸಲು ಕೋರಿದ ಅರಮನೆ ಆಡಳಿತ ಮಂಡಳಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 18:29 IST
Last Updated 3 ಏಪ್ರಿಲ್ 2019, 18:29 IST
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದು
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದು   

ಮೈಸೂರು: ಮೈಸೂರು ಅರಮನೆಯ ಜಯರಾಮ ದ್ವಾರದ ಬಲಭಾಗ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಜಿಲ್ಲಾ ಕಚೇರಿಯ ಗೋಡೆಗಳು ಹಾಗೂ ತಾರಸಿ ಬಿರುಕು ಬಿಟ್ಟಿವೆ. ‌

ಕುಸಿದು ಬೀಳುವ ಆತಂಕ ಮೂಡಿದ್ದು, ಶಿಥಿಲ ಕಟ್ಟಡದಲ್ಲೇ ಹಿರಿಯ ಸಾಹಿತಿಗಳು ಪುಸ್ತಕ ಬಿಡುಗಡೆ ಸೇರಿದಂತೆ ಹಲವು ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.‌

ಗೋಡೆಗಳು ಬಿರುಕು ಬಿಟ್ಟಿದ್ದರೆ, ಚಾವಣಿಯ ಆರ್‌ಸಿಸಿ ಕುಸಿಯುವ ಹಂತ ತಲುಪಿದೆ. ಕಿಟಕಿಗಳ ಬಳಿ ಗಾರೆಯು ಬಿದ್ದು ಹೋಗಿದೆ.

ADVERTISEMENT

‘ಈ ಕುರಿತು ಸಾಕಷ್ಟು ಬಾರಿ ಪರಿಷತ್ತಿಗೆ ಪತ್ರ ಬರೆಯಲಾಗಿದೆ. ಅವರದೇ ಆದ ದೊಡ್ಡ ಸುಸಜ್ಜಿತ ಕಟ್ಟಡ ವಿಜಯನಗರದಲ್ಲಿದೆ. ಕನಿಷ್ಠ 6 ತಿಂಗಳು ಖಾಲಿ ಮಾಡಿಕೊಟ್ಟರೆ ಕಟ್ಟಡವನ್ನು ದುರಸ್ತಿಗೊಳಿಸಿ ವಾಪಸ್ ಅವರಿಗೇ ನೀಡಲಾಗುವುದು. ಆದರೆ, ಕಸಾಪ ಪ್ರತಿನಿಧಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಪಕ್ಕದಲ್ಲೇ ಇರುವ ಮತ್ತೊಂದು ಮನೆಯೂ ಶಿಥಿಲಾವಸ್ಥೆಯಲ್ಲಿದೆ. ಇಲ್ಲಿ ಹಲವು ವರ್ಷಗಳಿಂದ ವಾಸವಿರುವ ಕುಟುಂಬದವರು ತೆರವು ಮಾಡಲು ಒಪ್ಪುತ್ತಿಲ್ಲ’ ಎಂದು ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.