ADVERTISEMENT

ಕರಡು ರಚನೆ: ಪಿಇಎಸ್ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 20:23 IST
Last Updated 1 ಅಕ್ಟೋಬರ್ 2020, 20:23 IST
ಪ್ರಿಯಾಂಕ ಮದಾನೆ
ಪ್ರಿಯಾಂಕ ಮದಾನೆ   

ಬೆಂಗಳೂರು: ಪುಣೆಯ ಶಂಕರರಾವ್‌ ಚವಾಣ್‌ ಕಾನೂನು ಕಾಲೇಜು ಆಯೋಜಿಸಿದ್ದ ಮಸೂದೆಗಳ ಕರಡು ರಚನಾ ಸ್ಪರ್ಧೆಯಲ್ಲಿ ನಗರದ ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜಯ ಸಾಧಿಸಿದ್ದಾರೆ.

ಸಾಂಕ್ರಾಮಿಕ ಕಾಯಿಲೆಗಳ ಮಸೂದೆ ಕುರಿತು ಶಾಸನ ರಚನಾ ಸ್ಪರ್ಧೆಯನ್ನು ಕಾಲೇಜು ಆಯೋಜಿಸಿತ್ತು. 30 ತಂಡಗಳು ಭಾಗವಹಿಸಿದ್ದವು. ಪಿಇಎಸ್‌ ಕಾಲೇಜಿನ ಬಿಬಿಎ ಎಲ್‌ಎಲ್‌ಬಿ ನಾಲ್ಕನೇ ವರ್ಷದಲ್ಲಿ ಓದುತ್ತಿರುವ ಪ್ರಿಯಾಂಕ ಮದಾನೆ ಹಾಗೂ ಬಿಬಿಎ ಎಲ್‌ಎಲ್‌ಬಿ ಎರಡನೇ ವರ್ಷದ ವಿದ್ಯಾರ್ಥಿನಿ ಎಸ್. ಸ್ಪಂದನಾ ರೆಡ್ಡಿ ರಚಿಸಿರುವ ಕರಡು ಪ್ರಥಮ ಸ್ಥಾನ ಗಳಿಸಿತು.

ಸ್ಪರ್ಧೆಯಲ್ಲಿ ವಿಜೇತರಾದವರ ಕರಡು ಮಸೂದೆಯನ್ನು ಪ್ರಧಾನಮಂತ್ರಿ ಕಚೇರಿಗೆ ಕಳುಹಿಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.

ADVERTISEMENT

ವಿದ್ಯಾರ್ಥಿನಿಯರ ಸಾಧನೆಗೆ ವಿಶ್ವವಿದ್ಯಾಲಯದ ಕುಲಪತಿ, ಕಾಲೇಜು ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.