ADVERTISEMENT

ದೇಶಕ್ಕಾಗಿ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗಲು ಸಿದ್ಧ: ಜಮೀರ್

​ಪ್ರಜಾವಾಣಿ ವಾರ್ತೆ
Published 4 ಮೇ 2025, 0:06 IST
Last Updated 4 ಮೇ 2025, 0:06 IST
   

ಹೊಸಪೇಟೆ (ವಿಜಯನಗರ): ‘ದೇಶಕ್ಕಾಗಿ ಯಾವುದೇ ತ್ಯಾಗಕ್ಕೆ ನಾನು ಸಿದ್ಧ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮತಿಸಿದರೆ ಮೈಗೆ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗಲೂ ಸಿದ್ಧ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

‘ನಾನು ಜೋಶ್ ಅಥವಾ ತಮಾಷೆಗೆ ಹೇಳುತ್ತಿಲ್ಲ. ಮಂತ್ರಿಯಾಗಿ ನನ್ನನ್ನು ಯುದ್ಧಕ್ಕೆ ಕರೆಯಲಿ, ಅಲ್ಲಾಹ್ ಮತ್ತು ದೇವರ ಆಣೆಗೂ ಆತ್ಮಾಹುತಿ ಬಾಂಬರ್ ಆಗಿ ಪಾಕಿಸ್ತಾನಕ್ಕೆ ಹೋಗುವೆ’ ಎಂದೂ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಮಾತು ಪಾಲಿಸುವುದಿಲ್ಲ ಎಂಬ ಟೀಕೆ ಕುರಿತು ಗಮನಸೆಳದಾಗ, ‘ಬಿ.ಎಸ್‌.ಯಡಿಯೂರಪ್ಪ ಸ್ವಂತ ಬಲದಿಂದ ಸಿ.ಎಂ ಆದರೆ ಅವರ ಮನೆಯಲ್ಲಿ ವಾಚ್‌ಮನ್‌ ಆಗುವೆ ಎಂದು ಹಿಂದೆ ಹೇಳಿದ್ದು ನಿಜ. ಆಗ ಅವರು ಸ್ವಯಂಬಲದಿಂದ ಸಿ.ಎಂ ಆಗಲಿಲ್ಲ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.