ಬೆಂಗಳೂರು: ಎಚ್‌ಎಎಲ್‌ನ ಹಗುರ ಯುದ್ಧ ವಿಮಾನ (ಎಲ್‌ಸಿಎ) ‘ಎಂಕೆ 1 ಎ’ ಗಾಗಿ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯು ‘ರಿಯರ್ ಫ್ಯೂಸ್‌ಲೇಜ್’ ಅನ್ನು ತಯಾರಿಸಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಸಮ್ಮುಖದಲ್ಲಿ ಭಾನುವಾರ ಹಸ್ತಾಂತರಿಸಲಾಯಿತು.
ಆಲ್ಫಾ ಟೋಕೋಲ್ ಎಂಜನಿಯರಿಂಗ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ‘ರಿಯರ್ ಫ್ಯೂಸ್‌ಲೇಜ್’ ಅನ್ನು ತಯಾರಿಸಿರುವ ಕಂಪನಿ.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥಸಿಂಗ್ ಅವರು, ಭಾರತದ ರಕ್ಷಣಾ ಉತ್ಪಾದನೆಯ ಐತಿಹಾಸಿಕ ಪ್ರಯಾಣದಲ್ಲಿ ಇದು ಮಹತ್ವದ ಮೈಲಿಗಲ್ಲು. ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಯತ್ತ ಭಾರತದ ಪ್ರಗತಿಗೆ ಮತ್ತು ಸಾರ್ವಜನಿಕ– ಖಾಸಗಿ ಪಾಲುದಾರಿಕೆ ವೃದ್ಧಿಸುವ ನಿಟ್ಟಿನಲ್ಲಿ ಸರ್ಕಾರದ ಬದ್ಧತೆಗೆ ಸಾಕ್ಷಿ ಎಂದು ಹೇಳಿದರು.
ಪೈಲಟ್, ಪ್ರಯಾಣಿಕರು ಮತ್ತು ಸರಕುಗಳನ್ನು ಹೊತ್ತೊಯ್ಯುವ ಮಹತ್ವದ ಭಾಗವನ್ನು ಫ್ಯೂಸ್‌ಲೇಜ್ ಎಂದು ಕರೆಯಲಾಗುತ್ತದೆ. ಅಲ್ಲದೆ, ರಿಯರ್ ಫ್ಯೂಸ್‌ಲೇಜ್ ವಿಮಾನದ ಹಿಂದಿನ ಭಾಗ ಮತ್ತು ಅಲ್ಲಿರುವ ಉಪಕರಣಗಳಿಗೆ ಹೆಚ್ಚಿನ ದೃಢತೆಯನ್ನು ನೀಡುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.