ADVERTISEMENT

‘ಸೀಡ್ಸ್ ಆಫ್‌ ಹೋಪ್‌’ ಕೇಶದಾನ ಅಭಿಯಾನ

ಕ್ಯಾನ್ಸರ್ ರೋಗಿಗಳನ್ನು ಕಂಡು ಮರುಗಿದ ಪುಟಾಣಿಗಳು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 21:29 IST
Last Updated 16 ಡಿಸೆಂಬರ್ 2020, 21:29 IST

ಮಂಗಳೂರು: ಕ್ಯಾನ್ಸರ್ ಕಿಮೊ ಥೆರಪಿಗೆ ಒಳಗಾದವರನ್ನು ಕಂಡು ಮರುಗಿದ ಪುತ್ತೂರಿನ ಪುಟಾಣಿಗಳು ಲಾಕ್‌ಡೌನ್ ಸಂದರ್ಭದಲ್ಲಿ ಖುದ್ದು ಕೇಶದಾನ ಮಾಡಿದ್ದು, ಈಗ ‘ಸೀಡ್ಸ್‌ ಆಫ್‌ ಹೋಪ್ ’ ಎಂಬ ತಂಡ ರಚಿಸಿಕೊಂಡು ಅಭಿಯಾನಕ್ಕೆ ಮುಂದಾಗಿದ್ದಾರೆ.

‘ನಾವು ದಾನಿಗಳಿಂದ ಕೂದಲು ಸಂಗ್ರಹಿಸಿ, ಕ್ಯಾನ್ಸರ್ ರೋಗಿಗಳಿಗೆ ವಿಗ್‌ ನೀಡಲು ಮುಂದಾಗಿದ್ದೇವೆ. ಇದಕ್ಕೆ ಮುಳಿಯ ಪ್ರತಿಷ್ಠಾನ, ರೋಟರಿ ಪುತ್ತೂರು ಪೂರ್ವ, ರೋಟರಿ ಪುತ್ತೂರು ಸಿಟಿ, ಜೇಸಿಐ ಪುತ್ತೂರು, ಜೇಸಿರೆಟ್ ಪುತ್ತೂರು, ಇನ್ನರ್‌ ವೀಲ್‌ ಪುತ್ತೂರು, ಲೇಡಿಸ್ ಬ್ಯೂಟಿ ಅಸೋಸಿಯೇಷನ್, ಹೇರ್ ಕ್ರೌನ್ ಸಂಸ್ಥೆಗಳು ಸಹಕಾರ ನೀಡಿದ್ದು, ಇದೇ 20ರಂದು ಅಧಿಕೃತ ಚಾಲನೆ ನೀಡಲಿದ್ದೇವೆ’ ಎಂದು ಅಭಿಯಾನದ ರೂವಾರಿ 10ನೇ ತರಗತಿಯ ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿಯ ತಿಳಿಸಿದರು.

‘ಈಗಾಗಲೇ 56 ಮಂದಿ ಕೂದಲು ನೀಡಲು ಮುಂದೆ ಬಂದಿದ್ದು, ಸಂಗ್ರಹವಾಗುವ ಕೂದಲನ್ನು ತಮಿಳುನಾಡಿನ ‘ಹೇರ್‌ ಕ್ರೌನ್‌’ಗೆ ಕಳುಹಿಸಿಕೊಡುತ್ತೇವೆ. ಅವರು ವಿಗ್‌ ತಯಾರಿಸಿ ನೀಡಿದ್ದನ್ನು ಬಡ ಕ್ಯಾನ್ಸರ್ ರೋಗಿಗಳಿಗೆ ವಿತರಿಸುತ್ತೇವೆ’ ಎಂದು ಅವರು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.