ADVERTISEMENT

ಸಿಎಂ ಇಬ್ರಾಹಿಂ ಮನವೊಲಿಕೆಗೆ ಮುಂದಾದ ಮಾಜಿ ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 19:30 IST
Last Updated 7 ಫೆಬ್ರುವರಿ 2022, 19:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಸಿ.ಎಂ. ಇಬ್ರಾಹಿಂ ಅವರ ಮನವೊಲಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ. ತಮ್ಮ ಆಪ್ತ ಎಚ್.ಸಿ. ಮಹದೇವಪ್ಪ ಮೂಲಕ ಇಬ್ರಾಹಿಂ ಜೊತೆ ಸಂಧಾನ ನಡೆಸಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ.

ಇಬ್ರಾಹಿಂ ಅವರ ಮನೆಗೆ ಸೋಮವಾರ ಭೇಟಿ ನೀಡಿ ಕೆಲಹೊತ್ತು ಮಾತುಕತೆ ನಡೆಸಿರುವ ಮಹದೇವಪ್ಪ, ಸಿದ್ದರಾಮಯ್ಯ ಅವರ ಸಂದೇಶವನ್ನು ತಲುಪಿಸಿದ್ದಾರೆ. ‘ಕಾಂಗ್ರೆಸ್ ತ್ಯಜಿಸಬೇಡಿ, ಮುಂದೆ ಸ್ಥಾನಮಾನ ಸಿಗುತ್ತದೆ’ ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಇಬ್ರಾಹಿಂ ಜೊತೆ ಮಾತನಾಡಿರುವುದಾಗಿ ಮಹದೇವಪ್ಪ ಹೇಳಿದ್ದಾನೆ. ಎಲ್ಲರೊಂ
ದಿಗೆ ಚರ್ಚಿಸುತ್ತೇನೆ ಎಂದು ಮಹದೇವಪ್ಪನಿಗೆ ಇಬ್ರಾಹಿಂ ಹೇಳಿದ್ದಾನೆ.ನಾನು ಕರೆ ಮಾಡಿಯಷ್ಟೇ ಅಲ್ಲ, ಮನೆಗೂ ಹೋಗಿ ಮಾತನಾಡುತ್ತೇನೆ’ ಎಂದರು‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.