ADVERTISEMENT

ಅಮೆರಿಕದ ಮೇಲೆ ಮತ್ತೆ ದಾಳಿಗೆ ಸಂಚು ರೂಪಿಸಿದ್ದ ಲಾಡೆನ್

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ವಾಷಿಂಗ್ಟನ್ (ಪಿಟಿಐ): ಹತ್ಯೆಯಾದ ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್, ಅಮೆರಿಕದ ಮೇಲೆ ಪುನಃ ಭಯೋತ್ಪಾದನಾ ದಾಳಿ ನಡೆಸಲು 9/11ರ ಉಗ್ರರ ದಾಳಿಯ 10ನೇ ವರ್ಷಾಚರಣೆಯ ಸಮಯ ಬಳಸಿಕೊಳ್ಳಲು ಎದುರು ನೋಡುತ್ತಿದ್ದ ಎಂದು ಶ್ವೇತಭವನದ ಭಯೋತ್ಪಾದನೆ ನಿಗ್ರಹ ಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಲಾಡೆನ್ ಅಡಗಿದ್ದ ಪಾಕಿಸ್ತಾನದ ಮನೆಯಲ್ಲಿ ಪತ್ತೆಯಾದ ಸಾಮಗ್ರಿಗಳು ಈ ಸಂಚನ್ನು ಪುಷ್ಟೀಕರಿಸುತ್ತವೆ~ ಎಂದು ಅಮೆರಿಕದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೆನನ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.