ADVERTISEMENT

ಅಸಾಂಜ್‌ಗೆ ‘ಮಾನಸಿಕ ಹಿಂಸೆ’

ಏಜೆನ್ಸೀಸ್
Published 31 ಮೇ 2019, 19:44 IST
Last Updated 31 ಮೇ 2019, 19:44 IST
   

ಜಿನೇವಾ: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಅವರು ‘ಮಾನಸಿಕ ಹಿಂಸೆ’ ಯಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ತಜ್ಞರೊಬ್ಬರು ಹೇಳಿದ್ದಾರೆ. ಬೆಲ್‌ಮಾರ್ಶ್ ಜೈಲಿನಲ್ಲಿರುವ ಅಸಾಂಜ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವಿಕಿಲೀಕ್ಸ್ ಗುರುವಾರ ಹೇಳಿತ್ತು.

ವಿಶ್ವಸಂಸ್ಥೆಯ ತಜ್ಞ ನಿಲ್ಸ್‌ ಮೆಲ್ಜರ್ ಅವರು ಅಸಾಂಜ್‌ ಅವರನ್ನು ಲಂಡನ್‌ ಜೈಲಿನಲ್ಲಿ ಮೇ 9 ರಂದು ಭೇಟಿ ಮಾಡಿದ್ದರು. ಏಳು ವರ್ಷ ಈಕ್ವೆಡಾರ್‌ನ ರಾಯಭಾರ ಕಚೇರಿಯಲ್ಲಿದ್ದ ಅಸಾಂಜ್‌ ಬಂಧನವಾಗಿ ಒಂದು ತಿಂಗಳ ನಂತರ ಈ ಭೇಟಿ ನಡೆದಿತ್ತು.

‘ದೈಹಿಕ ತೊಂದರೆಗಳ ಜತೆ ಅಸಾಂಜ್‌ ಅವರು ಮಾನಸಿಕ ಹಿಂಸೆ, ಅತಿಯಾದ ಒತ್ತಡ ಮತ್ತು ಚಿಂತೆಯಿಂದ ನರಳುತ್ತಿದ್ದಾರೆ’ ಎಂದು ನಿಲ್ಸ್‌ ಹೇಳಿದ್ದಾರೆ. ಮೆಲ್ಜರ್ ಅವರು ಇಬ್ಬರು ವೈದ್ಯಕೀಯ ತಜ್ಞರೊಂದಿಗೆ ಜೈಲಿನಲ್ಲಿ ಅಸಾಂಜ್‌ ಅವರನ್ನು ಭೇಟಿ
ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.