ADVERTISEMENT

ಆತ್ಮಹತ್ಯಾ ಸ್ಫೋಟ: ಶಾಸಕ ಸೇರಿ 28 ಸಾವು

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST

ಪೆಶಾವರ (ಪಿಟಿಐ): ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಪೆಟ್ರೋಲ್ ಬಂಕ್ ಮಾಲೀಕನ ಅಂತ್ಯಕ್ರಿಯೆ ವೇಳೆ ಆತ್ಮಹತ್ಯಾ ಬಾಂಬರ್ ನಡೆಸಿದ ಸ್ಫೋಟ ದಾಳಿಗೆ ಶಾಸ ಸೇರಿ 28 ಜನ ಸಾವಿಗೀಡಾದ ದುರ್ಘಟನೆ ವಾಯವ್ಯ ಪಾಕಿಸ್ತಾನದಲ್ಲಿ ನಡೆದಿದೆ. ದಾಳಿಯಲ್ಲಿ 57 ಜನ ಗಾಯಗೊಂಡಿದ್ದು, 10 ಜನರ ಸ್ಥಿತಿ ಗಂಭೀರವಾಗಿದೆ.

ಈ ಘಟನೆ ನಡೆದಿದ್ದು ಖೈಬರ್ ಪಖ್‌ತುಂಖ್ವಾ ಪ್ರದೇಶದ ಮರ್ದಾನ್ ಜಿಲ್ಲೆಯಲ್ಲಿ. ಮೇ 11ರಂದು ನಡೆದಿದ್ದ ಚುನಾವಣೆಯಲ್ಲಿ ಪ್ರಾಂತೀಯ ವಿಧಾನಸಭೆಗೆ ಶಾಸಕನಾಗಿ ಆಯ್ಕೆಯಾಗಿದ್ದ ಇಮ್ರಾನ್ ಖಾನ್ ಮೊಹಮ್ಮದ್ ಸಾವಿಗೀಡಾದ ಶಾಸಕ. ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಇವರು ನಂತರ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ತೆಹ್ರಿಕ್ ಎ ಇನ್ಸಾಫ್ ಪಕ್ಷ ಸೇರಿದ್ದರು. ಇದಕ್ಕೆ ಮುನ್ನ, ಖೈಬರ್ ಪಖ್‌ತುಂಖ್ವಾದ ಹಾಂಗು ಜಿಲ್ಲೆಯಲ್ಲಿ ಜೂನ್ 3ರಂದು ದಾಳಿ ನಡೆಸಿ ತೆಹ್ರಿಕ್ ಎ ಇನ್ಸಾಫ್ ಪಕ್ಷದ ಶಾಸಕ ಫರೀದ್ ಖಾನ್ ಅವರನ್ನು ಹತ್ಯೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.