ADVERTISEMENT

ಆರು ವರ್ಷಗಳ ನಂತರ ಪಾಕಿಸ್ತಾನದಲ್ಲಿ ಮಲಾಲ

ಏಜೆನ್ಸೀಸ್
Published 29 ಮಾರ್ಚ್ 2018, 12:10 IST
Last Updated 29 ಮಾರ್ಚ್ 2018, 12:10 IST
ಆರು ವರ್ಷಗಳ ನಂತರ ಪಾಕಿಸ್ತಾನದಲ್ಲಿ ಮಲಾಲ
ಆರು ವರ್ಷಗಳ ನಂತರ ಪಾಕಿಸ್ತಾನದಲ್ಲಿ ಮಲಾಲ   

ಇಸ್ಲಾಮಾಬಾದ್‌: ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ, ಮಾನವ ಹಕ್ಕುಗಳ ಯುವ ಹೋರಾಟಗಾರ್ತಿ ಮಲಾಲ ಯೂಸೂಫ್‌ಝೈ ಆರು ವರ್ಷಗಳ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. 

ಗುರುವಾರ ಪಾಕಿಸ್ತಾನ ಪ್ರಧಾನಿ ಶಾಹಿದ್‌ ಖಕಾನ್‌ ಅಬ್ಬಾಸಿ ಅವರನ್ನು ಭೇಟಿಯಾಗಿ ಮಲಾಲ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನಿ ಸಚಿವಾಲಯ ಖಚಿತಪಡಿಸಿದೆ. 

ಕಳೆದ ಆರು ವರ್ಷಗಳಿಂದ ಲಂಡನ್‌ನಲ್ಲಿ ವಾಸವಿರುವ ಮಲಾಲ ಬುಧವಾರ ತಡರಾತ್ರಿ ಎಮಿರೇಟ್ಸ್‌ 'EK-614' ವಿಮಾನದಲ್ಲಿ 1.41ಕ್ಕೆ ಬೆನಜಿರ್‌ ಭುಟ್ಟೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು ಎಂದು ಜಿಯೋ ಟಿವಿ ವರದಿ ಮಾಡಿದೆ.

ADVERTISEMENT

ಮಲಾಲ ತನ್ನ ಈ ಪ್ರವಾಸ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್‌ ಜಾವೇದ್ ಬಜ್ವಾ ಸೇರಿದಂತೆ ಪ್ರಮುಖ ಗಣ್ಯರೊಂದಿಗೆ ಚರ್ಚಿಸುವ ಇರಾದೆ ಹೊಂದಿದ್ದು, ‘ಮೀಟ್‌ ದಿ ಮಲಾಲ’ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.