ವಾಷಿಂಗ್ಟನ್ (ಪಿಟಿಐ): ವಿಶ್ವಬ್ಯಾಂಕ್ ಪ್ರಾಯೋಜಿತ ಜಾಗತಿಕ ಪ್ರಬಂಧ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯರಾದ ರವಿ ಸುಬ್ರಮಣಿಯನ್ ಮತ್ತು ವಿದ್ಯಾಧರ ಪ್ರಭುದೇಸಾಯಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದಿದ್ದಾರೆ.
`ಜಾಗತಿಕ ನಿರುದ್ಯೋಗ ಬಿಕ್ಕಟ್ಟು~ ವಿಷಯವಾಗಿ ಏರ್ಪಡಿಸಿದ್ದ ಸ್ಪರ್ಧೆಯನ್ನು ವಿಶ್ವಬ್ಯಾಂಕ್ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಫ್‌ಸಿ) ಮತ್ತು ವಿಶ್ವ ಜಾಗತಿಕ ಒಕ್ಕೂಟ ಜಂಟಿಯಾಗಿ ಸಂಘಟಿಸಿದ್ದವು.
ಯುವಕರು ನಿರುದ್ಯೋಗವನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಸ್ಪರ್ಧೆಯ ಉದ್ದೇಶವಾಗಿತ್ತು. ಲೆಬನಾನ್‌ನ ಮೇ ಹಬೀಬ್ ಪ್ರಥಮ ಬಹುಮಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.