ADVERTISEMENT

ಈಜಿಪ್ಟ್: ಬೀದಿಗಿಳಿದ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2011, 19:30 IST
Last Updated 18 ನವೆಂಬರ್ 2011, 19:30 IST
ಈಜಿಪ್ಟ್: ಬೀದಿಗಿಳಿದ ಪ್ರತಿಭಟನಾಕಾರರು
ಈಜಿಪ್ಟ್: ಬೀದಿಗಿಳಿದ ಪ್ರತಿಭಟನಾಕಾರರು   

 ಕೈರೊ (ಎಎಫ್‌ಪಿ): ಇಲ್ಲಿನ ತಹ್ರೀರ್ ಚೌಕದಲ್ಲಿ ಶುಕ್ರವಾರ ಸಮಾವೇಶಗೊಂಡಿದ್ದ ಸಾವಿರಾರು ಜನರು, ನಾಗರಿಕ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವಂತೆ ಆಡಳಿತಾರೂಢ ಸೇನೆಯನ್ನು ಆಗ್ರಹಿಸಿದರು.

ಸೇನೆಯ ಬಜೆಟ್‌ನ್ನು ಸಾರ್ವಜನಿಕ ಪರಿಶೀಲನೆಯಿಂದ ಹೊರತುಪಡಿಸುವ ಸಂವಿಧಾನದ ಅಧಿನಿಯಮವನ್ನು ಒಳಗೊಂಡ ಸರ್ಕಾರಿ ಕರಡನ್ನು ವಾಪಸ್ ಪಡೆಯುವಂತೆ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ವಿವಿಧ ಬ್ಯಾನರ್‌ಗಳ ಅಡಿ ಸೇರಿದ್ದ ರಾಜಕೀಯ ಪಕ್ಷಗಳು ಮತ್ತು ಧರ್ಮನಿರಪೇಕ್ಷ ಸಂಘಟನೆಗಳು, 2012ರ ಏಪ್ರಿಲ್‌ನ ಒಳಗೆ ಸೇನೆ ಅಧಿಕಾರ ಬಿಟ್ಟುಕೊಡಬೇಕು ಎಂದು ಕೋರಿದವು.

ದೇಶದಾದ್ಯಂತ ಭುಗಿಲೆದ್ದಿದ್ದ ದಂಗೆಯು, ಸುದೀರ್ಘ ಕಾಲ ಸರ್ವಾಧಿಕಾರ ನಡೆಸಿದ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರನ್ನು ಕಳೆದ ಫೆಬ್ರುವರಿಯಲ್ಲಿ ಅಧಿಕಾರದಿಂದ ಕೆಳಗಿಳಿಸಿದ ನಂತರ ಮೊದಲ ಬಾರಿಗೆ ಸಂಸದೀಯ ಚುನಾವಣೆ ಘೋಷಣೆಯಾಗಿದೆ. ಇದೇ 28ರಿಂದ ಆರಂಭವಾಗಲಿರುವ  ಚುನಾವಣೆ, ಮಾರ್ಚ್‌ನಲ್ಲಿ ಕೊನೆಗೊಳ್ಳುವ ನಿರೀಕ್ಷೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.