ADVERTISEMENT

ಎಚ್‌–1ಬಿ ವೀಸಾ ಹೊಂದಿರುವವರ ಪತಿ, ಪತ್ನಿಯ ಉದ್ಯೋಗ ಅವಕಾಶ ಸೌಲಭ್ಯಕ್ಕೆ ಬ್ರೇಕ್‌?

ಏಜೆನ್ಸೀಸ್
Published 24 ಏಪ್ರಿಲ್ 2018, 11:13 IST
Last Updated 24 ಏಪ್ರಿಲ್ 2018, 11:13 IST
ಎಚ್‌–1ಬಿ ವೀಸಾ ಹೊಂದಿರುವವರ ಪತಿ, ಪತ್ನಿಯ ಉದ್ಯೋಗ ಅವಕಾಶ ಸೌಲಭ್ಯಕ್ಕೆ ಬ್ರೇಕ್‌?
ಎಚ್‌–1ಬಿ ವೀಸಾ ಹೊಂದಿರುವವರ ಪತಿ, ಪತ್ನಿಯ ಉದ್ಯೋಗ ಅವಕಾಶ ಸೌಲಭ್ಯಕ್ಕೆ ಬ್ರೇಕ್‌?   

ವಾಷಿಂಗ್ಟನ್‌: ಎಚ್‌-1ಬಿ ವೀಸಾ ಹೊಂದಿ ಅಮೆರಿಕದಲ್ಲಿ ನೌಕರಿಯಲ್ಲಿರುವವರ ಗಂಡ ಅಥವಾ ಹೆಂಡತಿಗೂ ಉದ್ಯೋಗದ ಅವಕಾಶ ಕಲ್ಪಿಸುವ ಸೌಲಭ್ಯವನ್ನು ತೆಗೆದುಹಾಕಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಚಿಂತಿಸುತ್ತಿರುವುದಾಗಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಚ್‌-1ಬಿ ವೀಸಾ ಪಡೆದು ನೌಕರಿಯಲ್ಲಿರುವವರ ಜತೆಗೆ ಅಮೆರಿಕಕ್ಕೆ ಬಂದಿರುವವರ ಪೈಕಿ ಮಹಿಳೆಯರ ಪ್ರಮಾಣ ಶೇ 94 ಹಾಗೂ ಇದರಲ್ಲಿ ಶೇ 93ರಷ್ಟು ಮಹಿಳೆಯರು ಭಾರತೀಯ ಮೂಲದವರಾಗಿದ್ದಾರೆ. ಹಾಗಾಗಿ, ಟ್ರಂಪ್‌ ಸರ್ಕಾರ ತೆಗೆದುಕೊಳ್ಳಲಿರುವ ನಿರ್ಧಾರ ಭಾರತೀಯರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮ ಅವಧಿಯಿಂದ ಎಚ್‌–4 ವೀಸಾ ಮೂಲಕ ಉದ್ಯೋಗಕ್ಕೆ ಅವಕಾಶ ಪಡೆದಿರುವ 70 ಸಾವಿರಕ್ಕೂ ಹೆಚ್ಚು ಜನರು ಹೊಸ ನಿಯಮದ ಪರಿಣಾಮ ಎದುರಿಸಬೇಕಾಗುತ್ತದೆ.

ADVERTISEMENT

ಕೌಶಲ ಆಧರಿತ ಉದ್ಯೋಗ ಅರಸಿ ಬೇರೆ ದೇಶಗಳಿಂದ ಅಮೆರಿಕಕ್ಕೆ ಬರುವ ಅಭ್ಯರ್ಥಿಗಳಿಗೆ ಎಚ್–1ಬಿ ವೀಸಾ ನೀಡಲಾಗುತ್ತದೆ. ಭಾರತ, ಚೀನಾದ ಅಭ್ಯರ್ಥಿಗಳು ಇದರ ಹೆಚ್ಚಿನ ಫಲಾನುಭವಿಗಳಾಗಿದ್ದಾರೆ. ಎಚ್‌–1ಬಿ ವೀಸಾ ಹೊಂದಿರುವವರ ಗಂಡ ಅಥವಾ ಹೆಂಡತಿಗೆ ಒಬಾಮ ಆಡಳಿತ(2015) ಅವಧಿಯಲ್ಲಿ ಉದ್ಯೋಗಕ್ಕಾಗಿ ಎಚ್‌–4 ವೀಸಾ ನೀಡಲಾಗಿತ್ತು.

ಅಮೆರಿಕದ ನೌಕರರ ಹಿತಾಸಕ್ತಿ ಕಾಯ್ದುಕೊಳ್ಳುವ ಸಲುವಾಗಿ ವಲಸೆ ವ್ಯವಸ್ಥೆಯಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರುವ ಅಗತ್ಯವಿರುವುದಾಗಿ ಅಮೆರಿಕದ ‘ಪೌರತ್ವ ಮತ್ತು ವಲಸೆ ಸೇವೆ’ (ಯುಎಸ್‌ಸಿಐಎಸ್‌) ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.