ADVERTISEMENT

ಎಬೋಲಾ ಎಚ್ಚರಿಕೆ

ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2014, 20:10 IST
Last Updated 8 ಆಗಸ್ಟ್ 2014, 20:10 IST

ಜಿನಿವಾ (ಎಎಫ್‌ಪಿ): ಪಶ್ಚಿಮ ಆಫ್ರಿ­ಕಾ­ದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ‘ಎಬೋಲಾ’, ಅಂತರ­ರಾಷ್ಟ್ರೀಯ ಮಟ್ಟದಲ್ಲಿ ತುರ್ತಾಗಿ  ಪರಿಗಣಿಸಬೇಕಾದ ಗಂಭೀರ ಕಾಯಿಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಘೋಷಿಸಿದೆ.

ಇದುವರೆಗೆ ಸುಮಾರು ಒಂದು ಸಾವಿರ ಜನರನ್ನು ಬಲಿ ತೆಗೆದುಕೊಂಡ ಈ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಅದು

ರೋಗ ಲಕ್ಷಣ ದೆಹಲಿಯಲ್ಲಿ ಸೋಂಕು
ಅತಿಯಾದ ಜ್ವರ ಮತ್ತು ಕೆಲವು ಸಂದರ್ಭಗಳಲ್ಲಿ ನಿಲ್ಲದ ರಕ್ತಸ್ರಾವ. ರೋಗಿಯ ಎಂಜಲು, ರಕ್ತದಿಂದ ರೋಗ ಹರಡುತ್ತದೆ. ರೋಗಿಗಳ ಆರೈಕೆ ಮಾಡುವವರಿಗೆ ರೋಗ ತಗಲುವ ಸಾಧ್ಯತೆ ಹೆಚ್ಚು.
1976ರಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ರೋಗಕ್ಕೆ ಕಾಂಗೊ ಗಣರಾಜ್ಯದ ನದಿ ‘ಎಬೋಲಾ’ದ ಹೆಸರು ಇಡಲಾಗಿದೆ.
ಜೂನ್‌ 20ರಂದು ವಿದೇಶದಿಂದ ದೆಹಲಿಗೆ ಬಂದಿಳಿದ ವ್ಯಕ್ತಿಯೊ­ಬ್ಬರಲ್ಲಿ ಎಬೋಲಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ.
ಆದರೆ, ಈ ವ್ಯಕ್ತಿಯಲ್ಲಿ ಇನ್ನೂ ರೋಗ ಲಕ್ಷಣಗಳು ಕಾಣಿಸಿ­ಕೊಂಡಿಲ್ಲ. ಹೀಗಾಗಿ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಅಂತರರಾಷ್ಟ್ರೀಯ ಸಮುದಾ­ಯಕ್ಕೆ ಕರೆ ನೀಡಿದೆ.

ಪಶ್ಚಿಮ ಆಫ್ರಿಕಾದ ಸುಮಾರು 60 ಕಡೆಗಳಲ್ಲಿ ‘ಎಬೋಲಾ’ ಹಬ್ಬಿದ್ದು, ಇತರ ರಾಷ್ಟ್ರಗಳಲ್ಲಿ ಈ ಸಮಸ್ಯೆ ತಲೆದೋರುವ ದಿನಗಳು ದೂರವಿಲ್ಲ ಎಂದು

ಅಮೆರಿಕದ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ತರಾತುರಿಯಲ್ಲಿ ಜಿನಿವಾದಲ್ಲಿ ಎರಡು ದಿನ  ಸಭೆ ನಡೆಸಿ ‘ಜಾಗತಿಕ ಆರೋಗ್ಯ ತುರ್ತು ಸ್ಥಿತಿ’ ಘೋಷಣೆ ಮಾಡಿದರು.  

ಕಳೆದ 40 ವರ್ಷಗಳಲ್ಲಿ ಸಾಂಕ್ರಾ­ಮಿಕ ರೋಗವೊಂದು ಇಷ್ಟೊಂದು ವ್ಯಾಪಕವಾಗಿ ಹಬ್ಬಿದ ಉದಾಹರಣೆ ಇಲ್ಲ. ಆದ್ದರಿಂದ ಇದೊಂದು ಜಾಗತಿಕ ಗಂಡಾಂತರವೆಂದು ಭಾವಿಸಿ ತೊಂದರೆಯಲ್ಲಿ ಇರುವ ದೇಶಗಳಿಗೆ ಇತರ ರಾಷ್ಟ್ರಗಳು ಎಲ್ಲಾ ರೀತಿಯ ನೆರವು ನೀಡಬೇಕು ಎಂದು ಸಂಸ್ಥೆಯ ನಿರ್ದೇಶಕಿ ಡಾ. ಮಾರ್ಗರೆಟ್ ಚಾನ್ ಮನವಿ ಮಾಡಿದ್ದಾರೆ.

ಪಶ್ಚಿಮ ಆಫ್ರಿಕಾ ದೇಶಗಳಾದ ಲೈಬೀರಿಯಾ, ಗಿನಿ ಮತ್ತು ಸಿಯೆರಾ ಲಿಯೋನ್‌ನಲ್ಲಿ ಈ ರೋಗವು ಭಾರಿ ಅನಾಹುತ ಎಸಗಿದೆ.

ಲೈಬೀರಿಯಾದ ಗ್ರಾಂಡ್‌ ಕೇಪ್ ಮೌಂಟ್‌ ಪ್ರಾಂತ್ಯದ ಸೊಲ್ಡಿಯರ್‌  ಪಟ್ಟಣದಲ್ಲಿ ‘ಎಬೋಲಾ’ ಸೋಂಕಿ­ನಿಂದ ಸಾವಿಗೀಡಾದವರ ಶವಗಳು ಸಂಸ್ಕಾರ ಕಾಣದೆ ರಸ್ತೆ ಮೇಲೆ ಬಿದ್ದಿರುವುದರಿಂದ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ.

ಅನೇಕ ನಗರಗಳಲ್ಲಿ ರಾತ್ರಿ ಮನೋರಂಜನಾ ತಾಣಗಳನ್ನು ಮುಚ್ಚಲಾಗಿದೆ. ಈ ಹಿಂದೆ ಹಂದಿ ಜ್ವರ ಮತ್ತು ಪೋಲಿಯೊ ವ್ಯಾಪಕವಾಗಿ ಹಬ್ಬಿದ್ದಾಗ ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಸ್ಥಿತಿ ಘೋಷಿಸಿತ್ತು.

ಭಾರತದಲ್ಲಿ ಇಲ್ಲ: ಆತಂಕ ಬೇಕಿಲ್ಲ
ನವದೆಹಲಿ (ಪಿಟಿಐ):
ಜಗತ್ತಿನೆಲ್ಲೆಡೆ ಆತಂಕ­ ಸೃಷ್ಟಿಸುತ್ತಿರುವ ‘ಎಬೋಲಾ’ ಮಾರಿಯ ಸೋಂಕಿನ ಯಾವುದೇ ಪ್ರಕರಣ ಭಾರತದಲ್ಲಿ ವರದಿಯಾಗಿಲ್ಲ; ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಹೇಳಿದ್ದಾರೆ.

ದೇಶದಲ್ಲಿ ಎಬೋಲಾ ಕಾಣಿಸಿಕೊಳ್ಳದಿದ್ದರೂ ಸರ್ಕಾರ ಅಗತ್ಯ ಮುನ್ನೆ­ಚ್ಚರಿಕೆ ತೆಗೆದುಕೊಂಡಿದೆ. ವೈರಾಣು ಕಾಣಿಸಿಕೊಂಡ ದೇಶಗಳಿಂದ ಭಾರತಕ್ಕೆ ಬರುವ ಜನರ ಮೇಲೆ ನಿಗಾ ವಹಿಸಲಾಗಿದೆ ಎಂದಿದ್ದಾರೆ.

ಇದೇ ವೇಳೆ ಎಬೋಲಾ ಸೋಂಕು ಕಂಡುಬಂದಿರುವ ದೇಶಗಳಿಗೆ ಪ್ರವಾಸ ಕೈಗೊಳ್ಳದಿರಲು ಭಾರತೀಯರಿಗೆ ಸರ್ಕಾರ ಸೂಚಿಸಿದೆ. ಎಬೋಲಾ ಸೋಂಕು ಪತ್ತೆಯಾದ ದೇಶಗಳಲ್ಲಿ ಅಂದಾಜು 45,000 ಭಾರತೀಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.