ADVERTISEMENT

ಐರ್ಲೆಂಡ್: ಗರ್ಭಪಾತ ಕಾನೂನುಬದ್ಧಕ್ಕಿದ್ದ ಮೊದಲ ಅಡ್ಡಿ ನಿವಾರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:59 IST
Last Updated 3 ಜುಲೈ 2013, 19:59 IST

ಲಂಡನ್ (ಪಿಟಿಐ): ಐರ್ಲೆಂಡ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ, ಗರ್ಭಿಣಿ ಪ್ರಾಣಕ್ಕೆ ಅಪಾಯವಿದ್ದ ಸಂದರ್ಭದಲ್ಲಿ ಗರ್ಭಪಾತ ನಡೆಸಲು ಅವಕಾಶ ನೀಡುವ  ಕಾನೂನಿನ ಅಂಗೀಕಾರಕ್ಕೆ ಇದ್ದ ಮೊದಲ ಅಡ್ಡಿ ನಿವಾರಣೆಯಾಗಿದೆ.

ಕ್ಯಾಥೋಲಿಕ್ ರಾಷ್ಟ್ರವಾದ ಐರ್ಲೆಂಡ್‌ನ ಜನಪ್ರತಿನಿಧಿಗಳು ಹೊಸ ಕಾನೂನಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಐರ್ಲೆಂಡ್ ಸಂಸತ್ತಿನಲ್ಲಿ ಮಂಡಿಸಲಾಗಿದ್ದ `ಗರ್ಭಾವಸ್ಥೆಯಲ್ಲಿ ಜೀವ ರಕ್ಷಣೆ ಮಸೂದೆ'ಯನ್ನು ಸಂಸದರು ಅಂಗೀಕರಿಸಿದ್ದಾರೆ. ಮಸೂದೆ ಪರವಾಗಿ 138 ಮತಗಳು ಬಿದ್ದರೆ, 24 ಸಂಸದರು ಮಾತ್ರ ಮಸೂದೆಯನ್ನು ವಿರೋಧಿಸಿದ್ದಾರೆ. ಅಂತಿಮ ಹಂತದ ಅಂಗೀಕಾರಕ್ಕಾಗಿ ಮಸೂದೆ ಮುಂದಿನವಾರ ಸಂಸತ್ತಿನ ಮುಂದೆ ಬರಲಿದೆ.

ಕರ್ನಾಟಕ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ ಸಾವಿನ ನಂತರ ವಿಶ್ವದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಐರ್ಲೆಂಡ್ ಸರ್ಕಾರ ಹೊಸ ಕಾನೂನು ಜಾರಿಗೆ ಮುಂದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.