ADVERTISEMENT

ಕೆಂಪು ಈರುಳ್ಳಿ ಸೇವನೆಯಿಂದ ಕ್ಯಾನ್ಸರ್‌ ತಡೆಗಟ್ಟಬಹುದು!

ಏಜೆನ್ಸೀಸ್
Published 8 ಜೂನ್ 2017, 11:21 IST
Last Updated 8 ಜೂನ್ 2017, 11:21 IST
ಕೆಂಪು ಈರುಳ್ಳಿ ಸೇವನೆಯಿಂದ ಕ್ಯಾನ್ಸರ್‌ ತಡೆಗಟ್ಟಬಹುದು!
ಕೆಂಪು ಈರುಳ್ಳಿ ಸೇವನೆಯಿಂದ ಕ್ಯಾನ್ಸರ್‌ ತಡೆಗಟ್ಟಬಹುದು!   

ಒಂಟಾರಿಯೊ: ಕೆಂಪು ಈರುಳ್ಳಿಯ ಸೇವನೆಯು ಕ್ಯಾನ್ಸರ್‌ ತಡೆಗಟ್ಟಲು ನೆರವಾಗಲಿದೆ ಎಂಬುದು ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಕೆಂಪು ಈರುಳ್ಳಿಯಲ್ಲಿರುವ ಔಷಧೀಯ ಅಂಶಗಳು ಟ್ಯೂಮರ್‌ ಅನ್ನು ನಾಶಪಡಿಸುವಂಥ ಸಾಮರ್ಥ್ಯ ಹೊಂದಿವೆ ಎಂದು ಕೆನಡಾದ ಗುಲೆಫ್ ವಿಶ್ವವಿದ್ಯಾಲಯದ ಸಂಶೋಧಕ ಅಬ್ದುಲ್‌ಮೊನೆಮ್ ಮುರಯ್ಯನ್ ತಿಳಿಸಿದ್ದಾರೆ. ಕೆಂಪು ಈರುಳ್ಳಿ ಮಾತ್ರವಲ್ಲದೆ ಇತರ ತಳಿಯ ಈರುಳ್ಳಿಯಲ್ಲಿಯೂ ಕ್ಯಾನ್ಸರ್‌ ಕೋಶಗಳನ್ನು ನಾಶಪಡಿಸುವ ಶಕ್ತಿ ಇದೆ ಎಂದು ಅವರು ತಿಳಿಸಿದ್ದಾರೆ.

ದೊಡ್ಡ ಕರುಳಿನ ಕ್ಯಾನ್ಸರ್‌ ಕೋಶಗಳನ್ನು ಬಳಸಿಕೊಂಡು ಅಧ್ಯಯನ ನಡೆಸಲಾಗಿತ್ತು. ವಿವಿಧ ತಳಿಯ ಈರುಳ್ಳಿಯಲ್ಲಿರುವ ಔಷಧೀಯ ಅಂಶಗಳನ್ನು ದೊಡ್ಡ ಕರುಳಿನ ಕ್ಯಾನ್ಸರ್‌ ಕೋಶಗಳ ಜತೆ ನೇರ ಸಂಪರ್ಕಕ್ಕೆ ಬರುವಂತೆ ಇರಿಸಿ ಅಧ್ಯಯನ ನಡೆಸಲಾಗಿತ್ತು. ಈ ವೇಳೆ, ಕೆಂಪು ಈರುಳ್ಳಿಯಲ್ಲಿರುವ ಔಷಧೀಯ ಅಂಶಗಳು ಕ್ಯಾನ್ಸರ್‌ಕೋಶಗಳನ್ನು ನಾಶಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದು ಕಂಡುಬಂದಿತ್ತು.

ADVERTISEMENT

ಹೃದ್ರೋಗ ತಡೆ, ಕೊಬ್ಬು ಕರಗಿಸುವಿಕೆ ಮತ್ತಿತರ ಅನೇಕ ವಿಷಯಗಳಿಗೆ ಈರುಳ್ಳಿ ಸೇವನೆ ನೆರವಾಗುವುದು ಈ ಹಿಂದಿನ ಸಂಶೋಧನೆಗಳಲ್ಲೇ ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.