ADVERTISEMENT

ಗಡಾಫಿಗಾಗಿ ತೀವ್ರ ಬೇಟೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2011, 19:00 IST
Last Updated 25 ಆಗಸ್ಟ್ 2011, 19:00 IST
ಗಡಾಫಿಗಾಗಿ ತೀವ್ರ ಬೇಟೆ
ಗಡಾಫಿಗಾಗಿ ತೀವ್ರ ಬೇಟೆ   

ಲಂಡನ್/ ಬರ್ಲಿನ್/ ಕೈರೊ (ಪಿಟಿಐ): ತಲೆಮರೆಸಿಕೊಂಡಿರುವ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರನ್ನು ಜೀವಂತವಾಗಿ ಸೆರೆ ಹಿಡಿಯಲು, ಇಲ್ಲವೇ ಕೊಂದು ಹಾಕಲು ತೀವ್ರ ಶೋಧ ನಡೆಸಿರುವ ಸರ್ಕಾರಿ ವಿರೋಧಿ ಪಡೆಗಳಿಗೆ ಬ್ರಿಟನ್‌ನ ಪಡೆಗಳು ಕೈಜೋಡಿಸಿವೆ.

ಗಡಾಫಿ ಅವರ ಅಡಗುತಾಣ ಎಂದು ಶಂಕಿಸಲಾದ ಅಬು ಸಲೀಮ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಕಳೆದ 48 ಗಂಟೆಗಳಿಂದ ಎರಡೂ ಬಣಗಳ ನಡುವೆ ತೀವ್ರ ಕಾದಾಟ ನಡೆದಿದೆ.

ಗಡಾಫಿ ಅಧಿಕೃತ ನಿವಾಸವನ್ನು ವಶಪಡಿಸಿಕೊಂಡಿರುವ ವಿರೋಧಿ ಪಡೆಗಳು ಅಡಿಯಲ್ಲಿರುವ ಸುರಂಗ ಮಾರ್ಗದಲ್ಲಿ ಅಡಗಿ ಕುಳಿತಿದ್ದ ಸರ್ಕಾರಿ ಪಡೆಗಳ ಜೊತೆ ಗುಂಡಿನ ಚಕಮಕಿ ನಡೆಸಿವೆ. ಇದೇ ಸುರಂಗ ಮಾರ್ಗದಿಂದ ಗಡಾಫಿ ಪರಾರಿಯಾಗಿದ್ದಾರೆ ಎಂದು ನಂಬಲಾಗಿದೆ.

`ಲಿಬಿಯಾದ ಬಹುತೇಕ ಚಿನ್ನದ ನಿಕ್ಷೇಪ ಮತ್ತು ಗಣಿಗಳನ್ನು ಗಡಾಫಿ  ಖಾಲಿ ಮಾಡಿದ್ದಾರೆ. ಸುಮಾರು 10 ಶತಕೋಟಿ ಡಾಲರ್ ಮೌಲ್ಯದ ಚಿನ್ನವನ್ನು ಭದ್ರತಾ ವ್ಯವಸ್ಥೆ ಮತ್ತು ಗೆರಿಲ್ಲಾ ಯುದ್ಧಕ್ಕೆ ಬಳಸಿಕೊಂಡಿದ್ದಾರೆ~  ಎಂದು ಲಿಬಿಯನ್ ಕೇಂದ್ರ ಬ್ಯಾಂಕ್ ಮಾಜಿ ಮುಖ್ಯಸ್ಥ ಫರ‌್ಹಾತ್ ಬೆಂಗ್ಡಾರಾ ಆರೋಪಿಸಿದ್ದಾರೆ.

ಭಾರತಕ್ಕೆ ಆಹ್ವಾನ: ಫ್ರಾನ್ಸ್ ಮುಂದಿನ ವಾರ ಪ್ಯಾರಿಸ್‌ನಲ್ಲಿ ಆಯೋಜಿಸಿರುವ `ಲಿಬಿಯಾ ಮುಂದಿನ ಭವಿಷ್ಯ~ ಕುರಿತ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾರತಕ್ಕೂ ಆಹ್ವಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.