ADVERTISEMENT

ಚೀನಾದಲ್ಲಿ ಅಡಿಯಿಟ್ಟ 3ಡಿ ಟಿವಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಬೀಜಿಂಗ್, (ಪಿಟಿಐ): ತಂತ್ರಜ್ಞಾನ ಪ್ರಯೋಗಶೀಲತೆಗೆ ಹೆಸರಾದ ಚೀನಾ ಪ್ರಾಯೋಗಿಕವಾಗಿ ಮೊದಲ 3ಡಿ ದೂರದರ್ಶನ ಚಾನೆಲ್ ಆರಂಭಿಸಿದೆ. ರಾಷ್ಟ್ರದ ಟೆಲಿವಿಷನ್ ಉದ್ಯಮದಲ್ಲಿ ಇದೊಂದು ಗಮನಾರ್ಹ ಬೆಳವಣಿಗೆ ಎನ್ನಲಾಗಿದೆ.

ಸರ್ಕಾರಿ ಸ್ವಾಮ್ಯದ ಚೀನಾದ ಕೇಂದ್ರೀಯ ಟೆಲಿವಿಷನ್ (ಸಿಸಿಟಿವಿ) ಮತ್ತು ಬೀಜಿಂಗ್, ತೈಂಜಿನ್, ಶಾಂಘೈ, ಜೈಂಗ್ಸು ಹಾಗೂ ಶೆಂಜೆನ್‌ನಲ್ಲಿರುವ ಇತರ ಸ್ಥಳೀಯ ಚಾನೆಲ್‌ಗಳೊಂದಿಗೆ ಜಂಟಿಯಾಗಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. 3ಡಿ ಟಿವಿ ಹೊಂದಿರುವವರು ಹಾಗೂ ಹೈ ಡೆಫಿನಿಷನ್ ಡಿಜಿಟಲ್ ಸೆಟ್ ಟಾಪ್‌ಗಳನ್ನು ಹಾಕಿಕೊಂಡವರು 3ಡಿ ಪರಿಣಾಮದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ದಿನಕ್ಕೆ 13.5 ಗಂಟೆಗಳ ಕಾಲ ಈ ವಾಹಿನಿ ಪ್ರಸಾರವಾಗಲಿದೆ. ಜ.23ರಂದು ಈ ಚಾನೆಲ್ ಅಧಿಕೃತವಾಗಿ ಉದ್ಘಾಟನೆಯಾಗಲಿದೆ. ಜಪಾನ್, ದಕ್ಷಿಣ ಕೊರಿಯಾಗಳಲ್ಲಿ ಈಗಾಗಲೇ 3 ಡಿ ಟಿವಿ ಪ್ರಸಾರವಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.