ADVERTISEMENT

ಚೀನಾ: 800 ವರ್ಷ ಹಿಂದಿನ ಬಾಗಿಲು, ಶಸ್ತ್ರಾಸ್ತ್ರ ಪತ್ತೆ

ಪಿಟಿಐ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST

ಬೀಜಿಂಗ್: ಪ್ರಸಿದ್ಧ ಸೇನಾ ಕೋಟೆ ಎನಿಸಿದ್ದ ಬೈದಿ ಪಟ್ಟಣದಲ್ಲಿ 800 ವರ್ಷ ಹಳೆಯದಾದ ಗೋಡೆಯ ಕೆಲ ಭಾಗಗಳು ಹಾಗೂ ಬಾಗಿಲುಗಳನ್ನು ಚೀನಾದ ಪುರಾತತ್ವ ಇಲಾಖೆ ತಜ್ಞರು ಪತ್ತೆಹಚ್ಚಿದ್ದಾರೆ.

ಫೆಂಜಿ ಕೌಂಟಿಗೆ ಸೇರುವ ಬೈದಿ ಪಟ್ಟಣದಲ್ಲಿ ಫೆಬ್ರುವರಿ ತಿಂಗಳಲ್ಲಿ ಉತ್ಖನನ ಆರಂಭವಾಗಿತ್ತು. ಆರು ತಿಂಗಳ ಅವಧಿಯಲ್ಲಿ ಗೋಡೆಯ 20 ಭಾಗಗಳು, ಬಾಗಿಲುಗಳು, ರಕ್ಷಣಾ ಗೋಪುರ ಹಾಗೂ ಶಸ್ತ್ರಾಸ್ತ್ರಗಳು ಕಂಡುಬಂದಿವೆ.

ಇವು ಸಂಗ್ ಸಾಮ್ರಾಜ್ಯ (1127–1279) ಹಾಗೂ ಕ್ವಿಂಗ್ ಸಾಮ್ರಾಜ್ಯಕ್ಕೆ (1644–1912) ಸೇರಿದವು ಎಂಬುದು ದೃಢಪಟ್ಟಿದೆ ಎಂದು ಚಾಂಗ್‌ಕ್ವಿಂಗ್ ಸಾಂಸ್ಕೃತಿಕ ಪಾರಂಪರಿಕ ಸಂಶೋಧನಾ ಸಂಸ್ಥೆ ತಿಳಿಸಿದೆ.

ADVERTISEMENT

ಕಬ್ಬಿಣದ ಆಯುಧಗಳು, ಸೆರಾಮಿಕ್, ತಾಮ್ರ ಹಾಗೂ ಕಲ್ಲಿನಿಂದ ಮಾಡಿದ ಕಲಾಕೃತಿಗಳೂ ಇಲ್ಲಿ ದೊರೆತಿವೆ. ಪಟ್ಟಣದ ಭೂನಕ್ಷೆಯನ್ನು ಸಂಶೋಧಕರ ತಂಡ ಗುರುತಿಸಿದೆ. ಬೈದಿ ಪಟ್ಟಣ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ನಡೆಸಿದ ಉತ್ಖನನದಿಂದ, ಆ ಕಾಲದಲ್ಲಿ ಸಂಪೂರ್ಣ ರಕ್ಷಣಾ ವ್ಯವಸ್ಥೆ ಇತ್ತು ಎಂಬ ಅಂಶವನ್ನು ತಂಡ ಕಂಡುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.