ಬರ್ಲಿನ್ (ಪಿಟಿಐ): ಭಾರತದಲ್ಲಿ ಡಚ್ ಬ್ಯಾಂಕ್ ಮುಖ್ಯಸ್ಥರಾಗಿರುವ ಗುನಿತ್ ಛಡ್ಡಾ ಅವರು ಜರ್ಮನಿಯ ಈ ಬೃಹತ್ ಬ್ಯಾಂಕ್‌ನ ಉನ್ನತ ನಾಯಕತ್ವವನ್ನು ಪಡೆಯಲಿದ್ದಾರೆ. ಮುಂಬರುವ ಮೇ ತಿಂಗಳ ಅಂತ್ಯಕ್ಕೆ ಬ್ಯಾಂಕ್‌ನ ಸಹ-ಅಧ್ಯಕ್ಷರಾಗಿ ಭಾರತೀಯ ಮೂಲದ ಅನ್ಶು ಜೈನ್ ಅವರು ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿಯೆ ಛಡ್ಡಾ ಕೂಡಾ ಪದೋನ್ನತಿ ಪಡೆಯಲಿದ್ದಾರೆ.
ಡಚ್ ಬ್ಯಾಂಕ್ ಮೇಲ್ವಿಚಾರಣಾ ಮಂಡಳಿಯು ಶುಕ್ರವಾರ ಛಡ್ಡಾ ಅವರನ್ನು ಉನ್ನತ ಪ್ರಭಾವ ಹೊಂದಿರುವ ಸಮೂಹ ಕಾರ್ಯಕಾರಿ ಸಮಿತಿ (ಜಿಇಸಿ)ಯ ಹೊಸ ಸದಸ್ಯರನ್ನಾಗಿ ನೇಮಿಸಿದ್ದು, ಸಮಿತಿಯ ಸದಸ್ಯರ ಸಂಖ್ಯೆಯನ್ನು 12ರಿಂದ 18ಕ್ಕೆ ಏರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.